ಶಿರಾಡಿ ಘಾಟ್‌ನಲ್ಲಿ ಮಗುಚಿ ಬಿದ್ದ ಲಾರಿ

ಚಾಲಕನ ನಿಯಂತ್ರಣ ತಪ್ಪಿ ಘಟನೆ
ಹೆದ್ದಾರಿಯಲ್ಲಿ ಲಾರಿ ಮಗುಚಿ ಬಿದ್ದಿರುವುದು.
ಹೆದ್ದಾರಿಯಲ್ಲಿ ಲಾರಿ ಮಗುಚಿ ಬಿದ್ದಿರುವುದು.
Published on: 

ಉಪ್ಪಿನಂಗಡಿ: ಬೃಹತ್ ಗಾತ್ರದ ಪೈಪ್‌ಗಳನ್ನು ಸಾಗಾಟ ಮಾಡುತ್ತಿದ್ದ ಲಾರಿಯೊಂದು ಚಾಲಕನ ನಿಯಂತ್ರಣ ತಪ್ಪಿ ಹೆದ್ದಾರಿಯಲ್ಲಿಯೇ ಮಗುಚಿ ಬಿದ್ದ ಘಟನೆ ಸೋಮವಾರ ರಾ.ಹೆ.75ರ ಶಿರಾಡಿ ಘಾಟ್ ರಸ್ತೆಯಲ್ಲಿ ಸಂಭವಿಸಿದೆ.

ಬೆಂಗಳೂರಿನಿಂದ ಮಂಗಳೂರಿನತ್ತ ಪೈಪ್‌ಗಳನ್ನು ಸಾಗಿಸುತ್ತಿದ್ದ ಲಾರಿ ಘಾಟಿಯ ತಿರುವಿನಲ್ಲಿ ಚಾಲಕನ ನಿಯಂತ್ರಣಕ್ಕೆ ಸಿಲುಕದೆ ಮಗುಚಿ ಬಿದ್ದಿದ್ದು ಚಾಲಕ ಸಣ್ಣಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಪೈಪ್‌ಗಳು ಹೆದ್ದಾರಿಯಲ್ಲಿ ಬಿದ್ದ ಕಾರಣ ಸಂಚಾರಕ್ಕೆ ಕೆಲಕಾಲ ಅಡಚಣೆಯಾಗಿತ್ತು. ಘಟನಾ ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಹೆದ್ದಾರಿ ಸಂಚಾರ ಸುಸ್ಥಿತಿಗೆ ತಂದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net