

ಪ್ರಮುಖ ಮುಖ್ಯಾಂಶಗಳು
ಪುತ್ತೂರು:ಬಹುಗ್ರಾಮ ಕುಡಿಯುವ ನೀರಿನ ಯೋಜನೆಯಲ್ಲಿ ಅಧಿಕಾರಿಗಳು ಕರ್ತವ್ಯಲೋಪವೆಸಗಿ ಅಸಮರ್ಪಕ ಕಾಮಗಾರಿ ನಡೆಸಿದ ಬಗ್ಗೆ ಲೋಕಾಯುಕ್ತಕ್ಕೆ ನೀಡಿದ ದೂರಿನ ತನಿಖೆಗೆ ಮಂಗಳವಾರ ಪುತ್ತೂರು ಹಾಗೂ ಬಂಟ್ವಾಳ ತಾಲೂಕಿನ ವಿವಿಧ ಗ್ರಾಮಗಳಿಗೆ ಆಗಮಿಸಿದರು.
ಬಲ್ನಾಡುದೇವಸ್ಯ ರಸ್ತೆಯ ಉಜ್ರುಪಾದೆ, ಬಬ್ಲಿ, ಕುರುಡಕಟ್ಟೆ ಭಾಗದಲ್ಲಿ ರಸ್ತೆಬದಿ ಕಿತ್ತು ಹೋಗಿರುವುದು, ಪ್ಲಾಸ್ಟಿಕ್ ತ್ಯಾಜ್ಯ ಬಿಟ್ಟು ಹೋಗಿರುವುದು, ರಸ್ತೆ ತುಂಡರಿಸಿ ಸರಿಪಡಿಸದಿರುವುದು ಕಂಡುಬಂದಿದೆ. ಸುಬ್ರಹ್ಮಣ್ಯ ಮಂಜೇಶ್ವರ ರಸ್ತೆಯ ಬಿಳಿಯೂರುಕಟ್ಟೆ ಮೋರಿ ಕುಸಿತಗೊಂಡಿರುವುದು, ಚರಂಡಿ ದುರಸ್ತಿ ಮಾಡದಿರುವುದು, ಮಲ್ಲಿಕಟ್ಟೆಯಲ್ಲಿ ಜೆಸಿಬಿ ಡಾಂಬರು ರಸ್ತೆ ಹಾನಿ ಮಾಡಿರುವುದನ್ನು ಗಮನಿಸಿದರು. ಸಾರಡ್ಕ ಪರಿಯಾಲ್ತಡ್ಕ ರಸ್ತೆಯ ಮನೆಲಾ ಚರ್ಚ್, ಮಲೆತ್ತಡ್ಕ, ಗುಡ್ಡಗದ್ದೆ, ದಡ್ಡಲ್ತಡ್ಕ ದಲ್ಲಿ ಆಗಿರುವ ಸಮಸ್ಯೆ ಪರಿಶೀಲಿಸಿದರು.
ತೋರಣಕಟ್ಟೆನೆಲ್ಲಿಗುಡ್ಡೆ ರಸ್ತೆಯ ದೇರಣಮೂಲೆ (ಜುಮಾದಿ ಮೂಲೆ) ಮೋರಿ ಹಾಗೂ ಚರಂಡಿ ಸಮಸ್ಯೆ ಜತೆಗೆ ಜೆಸಿಬಿಯಿಂದ ರಸ್ತೆ ಡಾಂಬರು ಕಿತ್ತು ಹೋಗಿರುವುದನ್ನು ಪರಿಶೀಲನೆ ನಡೆಸಿದರು. ಕುದ್ದುಪದವು ಪೆರುವಾಯಿ ರಸ್ತೆಯ ಕುದ್ದುಪದವು, ಆದಾಳ ಭಾಗದಲ್ಲಿ ರಸ್ತೆಬದಿಯ ಅಗೆತದಿಂದ ಆಗಿರುವ ಸಮಸ್ಯೆ ಪರಿಶೀಲಿಸಿದರು. ವಿಟ್ಲ ಕಬಕ ರಸ್ತೆಯ ಚಂದಳಿಕೆ, ಕಂಬಳಬೆಟ್ಟು ಸೇರಿ ವಿವಿಧ ಕಡೆಯಲ್ಲಿ ಕಾಮಗಾರಿಗಳಿಂದ ಆಗುತ್ತಿರುವ ಸಮಸ್ಯೆಯ ಮಾಹಿತಿ ಪಡೆದುಕೊಂಡರು.
ಉಪಅಧೀಕ್ಷಕಿ ಡಾ. ಗಾನಾ ಪಿ. ಕುಮಾರ್ ನೇತೃತ್ವದ ತಂಡ ತನಿಖೆ ಕೈಗೊಂಡಿದ್ದಾರೆ. ದೂರುದಾರ ವೆಂಕಟ್ರಮಣ ಪುಣಚ ಹಾಜರಿದ್ದು ಸಮಸ್ಯೆಗಳನ್ನು ತೋರಿಸಿದರು. ಸ್ಥಳೀಯ ನಿವಾಸಿಗಳಾದ ಶ್ರೀಧರ ಶೆಟ್ಟಿ ಬೈಲುಗುತ್ತು, ವಸಂತ ನಾಯಕ್ ಆಜೇರು ಮತ್ತಿತರರು ಹಾಜರಿದ್ದರು.
ದೂರುನೀಡಲು ಸೂಚನೆ
ಬಹುಗ್ರಾಮಪೈಪ್ಲೈನ್ನಿಂದ ಮಣ್ಣಿನಿಂದ ಜ.೩ರಂದು ಅಪಘಾತವಾಗಿಗಾಯಗೊಂಡ ಬಿಟ್ಟಿಮೂಲೆ ನಿವಾಸಿ ಜಯರಾಮ್, ನಿಖಿಲ್ ಘಟನೆ ನಡೆದ ಸ್ಥಳದಲ್ಲಿ ಸಮಸ್ಯೆಯನ್ನು ತಿಳಿಸಿದರು. ಖರ್ಚು ವೆಚ್ಚಗಳನ್ನು ತಾವೇ ಭರಿಸಿಕೊಂಡ ಕಾರಣ ಗುತ್ತಿಗೆ ವಹಿಸಿಕೊಂಡವರ ಮೇಲೆ ನಿರ್ಲಕ್ಷ್ಯ ದೂರು ದಾಖಲಿಸಿ ಅವರಿಂದ ಆಸ್ಪತ್ರೆಯ ಖರ್ಚು ವೆಚ್ಚವನ್ನು ಭರಿಸುವಂತೆ ಮಾಡಬೇಕೆಂದು ಲೋಕಾಯುಕ್ತ ಅಧಿಕಾರಿಗಳು ಸೂಚನೆ ನೀಡಿದರು.
ಅಧಿಕಾರಿಗಳಗಮನಕ್ಕೆ ತನ್ನಿ!
ಕುದ್ದುಪದವುತಿರುವಿನಲ್ಲಿ ಪೈಪ್ಲೈನ್ ಅಳವಡಿಕೆಯಿಂದರಸ್ತೆ ಕುಸಿಯುವ ಭೀತಿ ಎದುರಾಗಿದೆ. ಕುಸಿತವಾದರೆ ಕೆಳಗಿರುವ ಕುಡಿಯುವ ನೀರಿನ ಮೂಲ ನಾಶವಾಗಲಿದೆ. ಈ ಕಾರಣ ತಡೆಗೋಡೆನಿರ್ಮಾಣ ಮಾಡಿ ಅಗತ್ಯ ವ್ಯವಸ್ಥೆ ಕಲ್ಪಿಸಬೇಕೆಂದು ಸ್ಥಳೀಯ ನಿವಾಸಿಗಳು ಲೋಕಾಯುಕ್ತ ಅಧಿಕಾರಿಗಳು ಕೇಳಿಕೊಂಡರು. ಈ ಸಂದರ್ಭ ಸ್ಥಳೀಯಾಡಳಿತಸಹಿತ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ದೂರು ನೀಡಿ ಅಗತ್ಯ ಕ್ರಮಕೈಗೊಳ್ಳದಿದ್ದಲ್ಲಿ ಮಾಹಿತಿ ನೀಡುವಂತೆ ಸೂಚಿಸಿದರು.
ಬಹುಗ್ರಾಮಕುಡಿಯುವ ನೀರಿನ ಯೋಜನೆಯ ಸಮಸ್ಯೆಗಳು ಕಳೆದ ಮಾರ್ಚ್ನಿಂದ ಪ್ರಾರಂಭವಾಗಿದ್ದು,ಇದನ್ನು ವಿಜಯವಾಣಿ ನಿರಂತರ ವರದಿ ಮಾಡಿತ್ತು. ಈ ಎಲ್ಲಾ ವರದಿಗಳನ್ನುಲೊಕಾಯುಕ್ತ ಅಕಾರಿಗಳು ಗಂಭೀರವಾಗಿ ಪರಿಗಣಿಸಿದ್ದಾರೆ.