_1764763876980.webp?w=480&auto=format%2Ccompress&fit=max)
_1764763876980.webp?w=480&auto=format%2Ccompress&fit=max)
ಮಲವಂತಿಗೆ ಗ್ರಾಮದ ಪಾಮಾಜಿ ಜನವಸತಿ ಪ್ರದೇಶದ ಸಮಸ್ಯೆ ನನ್ನ ಗಮನಕ್ಕೆ ಬಂದ ಕೂಡಲೇ ರಸ್ತೆ ಸಂಪರ್ಕಕ್ಕೆ ಅನುಕೂಲವಾಗುವಂತೆ ನದಿಗೆ ಅಡ್ಡಲಾಗಿ ಸೇತುವೆ ನಿರ್ಮಿಸಲಾಗಿತ್ತು. ಆದರೆ ರಸ್ತೆ ನಿರ್ಮಿಸಲು ಪಟ್ಟ ಜಮೀನಿನಲ್ಲಿ ರಸ್ತೆ ಹಾದು ಹೋಗಬೇಕಾಗಿದ್ದರಿಂದ ರಸ್ತೆ ಕಾಮಗಾರಿ ವಿಳಂಬವಾಗಿತ್ತು. ಈಗ ಸ್ಥಳೀಯ ನಿವಾಸಿಗಳೇ ತಮ್ಮ ಪಟ್ಟಾ ಜಾಗವನ್ನು ರಸ್ತೆ ನಿರ್ಮಿಸಲು ನೀಡಿ ಸಹಕರಿಸಿದ ಪರಿಣಾಮ ರಸ್ತೆಗೆ ಶಿಲಾನ್ಯಾಸ ನೆರವೇರಿಸಲಾಗಿದೆ.
ಈ ಭಾಗದಲ್ಲಿ ಮೂಲ ಸೌಕರ್ಯವೇ ಇಲ್ಲದ್ದನ್ನು ಮನಗಂಡ ಶಾಸಕ ಹರೀಶ್ ಪೂಂಜ ಮಲವಂತಿಗೆ ಭಾಗಕ್ಕೆ ಹೆಚ್ಚಿನ ಒತ್ತು ನೀಡಿದ್ದಾರೆ. ಮೂರು ಕುಟುಂಬಗಳ ದೊಡ್ಡ ಮನಸ್ಸಿನಿಂದ 60 ಮನೆಗಳಿಗೆ ಸಂಪರ್ಕ ರಸ್ತೆ ನಿರ್ಮಾಣವಾಗುವಂತಾಗಿದೆ.
ನಾನು ನನ್ನ ಮನೆ ನಿರ್ಮಾಣ ಸಂದರ್ಭ ಯಾವುದೇ ಸೇತುವೆ, ರಸ್ತೆ ಇಲ್ಲದಂತಹ ಪರಿಸ್ಥಿತಿಯಲ್ಲಿ ಮನೆ ನಿರ್ಮಾಣಕ್ಕೆ ಬೇಕಾದ ಕಲ್ಲು, ಸಿಮೆಂಟ್, ಮರಳು ಮುಂತಾಷದ ವಸ್ತುಗಳನ್ನು ನದಿಯಲ್ಲಿಯೇ ಹೊತ್ತು ತಂದಿದ್ದೇವೆ. ಮನೆ ಇನ್ನೂ ಪೂರ್ಣಗೊಂಡಿಲ್ಲ. ಸಂಪರ್ಕ ರಸ್ತೆಯಿಂದಾಗಿ ಮನೆ ಪೂರ್ಣಗೊಳ್ಳುವ ಭರವಸೆ ಇದೆ.