ಗ್ರಾಪಂ ವಾರ್ಡ್‌ಗಳಿಗೆ 28274 ಅಭ್ಯರ್ಥಿಗಳು, ಬ್ಲಾಕ್ ಪಂಚಾಯಿತಿಗೆ 3742, ಜಿಪಂಗೆ 681, ಪುರಸಭೆಗಳಿಗೆ 5546, ನಿಗಮಗಳಿಗೆ 751 ಅಭ್ಯರ್ಥಿಗಳು ಕಣದಲ್ಲಿದ್ದಾರೆ. ಅಭ್ಯರ್ಥಿಗಳ ಆಯ್ಕೆ ಪೂರ್ಣಗೊಂಡಿರುವ 18274 ನಿಯಂತ್ರಣ ಘಟಕಗಳು, 49019 ಮತಪತ್ರ ಘಟಕಗಳು ಮತದಾನಕ್ಕೆ ಸಿದ್ಧವಾಗಿವೆ. 2631 ನಿಯಂತ್ರಣ ಘಟಕಗಳು, 6943 ಮತಪತ್ರ ಘಟಕಗಳನ್ನು ಮೀಸಲು ಇಡಲಾಗಿದೆ ಎಂದು ಚುನಾವಣಾ ಆಯೋಗ ತಿಳಿಸಿದೆ.