ಚಾಲಕ, ಜವಾನ, ವಾಚ್‌ಮೆನ್, ಪೌರ ಕಾರ್ಮಿಕ, ಪಂಪ್ ಆಪರೇಟರ್, ಎಸ್.ಡಿ.ಸಿ., ವಾಲ್‌ಮ್ಯಾನ್, 2ನೇ ದರ್ಜೆ ಗುಮಾಸ್ತ, ಬಿಲ್ ಕಲೆಕ್ಟರ್ ಮೊದಲಾದವರ ಹೆಸರಿನಲ್ಲಿ ಸಾಲ ಪಡೆಯಲಾಗಿದೆ. ಮಂಗಳೂರು ತಾಲೂಕು ಹೊರತುಪಡಿಸಿ ಪುತ್ತೂರು, ಕನ್ಯಾನ, ಪಡುಬಿದ್ರಿ ಮೊದಲಾದ ಕಡೆಯವರು ಇದ್ದಾರೆ. ಈ ಪೈಕಿ ಯಾರೊಬ್ಬರೂ ಮಹಾನಗರ ಪಾಲಿಕೆಯ ನೈಜ ಕೆಲಸಗಾರರಲ್ಲ ಎಂಬುದು ಗಮನಾರ್ಹ.