

ಪ್ರಮುಖ ಮುಖ್ಯಾಂಶಗಳು
ನನ್ನ ಜೀವನಕ್ಕೆ ಆಸರೆಯಾಗಬೇಕೆಂಬ ನಿಟ್ಟಿನಲ್ಲಿ ಪಂಚಾಯಿತಿ ಸದಸ್ಯ ಸುನೀಲ್ ಕುಮಾರ್ ಸುವರ್ಣ ಕಷ್ಟಪಡುತ್ತಿದ್ದಾರೆ. ಈಗಾಗಲೇ ಜಾತಿ ಸರ್ಟಿಫಿಕೆಟ್, ಹೊಸ ಪಡಿತರ ಚೀಟಿ, ಆಧಾರ್ ಕಾರ್ಡ್ ಮಾಡಿಸಿಕೊಟ್ಟಿದ್ದಾರೆ. ಜಾತಿ ಸರ್ಟಿಫಿಕೆಟ್ ಸಿಕ್ಕ ಬಳಿಕ ಸೋಮವಾರದಿಂದ ಪಂಚಾಯಿತಿಯಿಂದ ನೀರಿನ ಟ್ಯಾಂಕ್ ಸಿಕ್ಕಿದೆ. ಸದ್ಯ ಅಗತ್ಯ ದಾಖಲೆಗಳಿದ್ದು, ಇನ್ನಾದರೂ ಸವಲತ್ತು ಸಿಗಬಹುದು ಎಂಬ ಆಶಾಭಾವನೆಯಲ್ಲಿದ್ದೇನೆ. ವಯಸ್ಸಾಗಿದೆ, ಈಗಾಗಲೇ ಇವೆಲ್ಲ ಸಿಗಬೇಕಿತ್ತು. ಜೀವಿತದ ಕೊನೆಗಾಲದಲ್ಲಾದರೂ ಸರ್ಕಾರ ನನ್ನತ್ತ ಕಣ್ತೆರೆದು ನೋಡಿದರೆ ವಾಸ್ತವ ತಿಳಿಯುವುದು. ಮಳೆಗಾಲದಲ್ಲಿ ಮನೆ ಸೋರುತ್ತದೆ. ಗಾಳಿ-ಮಳೆ ಚಳಿ ಸಹಿಸಿಕೊಂಡು ಬದುಕಿಕುತ್ತಿದ್ದೇನೆ. ಎಲ್ಲ ಸಂದರ್ಭದಲ್ಲೂ ನೆರೆಮನೆಯರು ಸಹಾಯ ಮಾಡುತ್ತಿದ್ದಾರೆ.
ಹೇಮಾ ಅವರಿಗೆ ಜಾತಿ ಸರ್ಟಿಫಿಕೆಟ್, ಪಡಿತರ ಚೀಟಿ ಮತ್ತು ಆಧಾರ ಕಾರ್ಡ್ ಮಾಡಲು ಕಳೆದ ಮೂರ‌್ನಾಲ್ಕು ವರ್ಷಗಳಿಂದ ಪ್ರಯತ್ನಿಸಿದ್ದೆ. ಈಗ ಅವು ಸಿಕ್ಕಿವೆ. ವೃದ್ಧಾಪ್ಯದಲ್ಲಿ ಏಕಾಂಗಿಯಾಗಿ ಜೀವನ ಸಾಗಿಸುತ್ತಿರುವ ಅವರ ಹರಕಲು ಮನೆಗೆ ವಿದ್ಯುತ್ ದೀಪ, ರಸ್ತೆ ನಿರ್ಮಾಣ, ಶೌಚಗೃಹ ಮತ್ತು ಮನೆ ನಿರ್ಮಿಸಿ ಕೊಡುವ ನಿಟ್ಟಿನಲ್ಲಿ ಪ್ರಯತ್ನಿಸುತ್ತಿದ್ದೇನೆ. ಇದೀಗ ಪಂಚಾಯಿತಿ ಅನುದಾನದಿಂದ ಶೌಚಗೃಹ ನಿರ್ಮಿಸುತ್ತಿದ್ದೇನೆ.
ಕೊರಗ ಜನಾಂಗದ ವೃದ್ಧೆಗೆ ಇನ್ನೂ ಮೂಲಸೌಕರ್ಯ ಲಭಿಸಿಲ್ಲ ಮತ್ತು ಉಳಿದುಕೊಳ್ಳಲು ಸರಿಯಾದ ಸೂರಿಲ್ಲ ಎಂಬುದು ಕೇಳಿ ದುಃಖವಾಯಿತು. ಅವರಿಗೆ ಮನೆ ನಿರ್ಮಿಸಿ ಕೊಡುವ ಜವಾಬ್ದಾರಿ ನನಗೆ ಬಿಡಿ. ಸರ್ಕಾರದಿಂದ ಕೊರಗ ಜನಾಂಗಕ್ಕೆ ಯಾವೆಲ್ಲ ಸವಲತ್ತು ಸಿಗಬೇಕೋ ಅವು ಮುಂದಿನ ದಿನಗಳಲ್ಲಿ ಸಿಗುವಂತೆ ಪ್ರಯತ್ನಿಸುವೆ.