ಪಡುಪೆರಾರದಲ್ಲಿ ಚಿರತೆ ಪ್ರತ್ಯಕ್ಷ

ಪಡುಪೆರಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚಿರತೆ ಕಂಡುಬಂದಿದೆ.
ಪಡುಪೆರಾರ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಚಿರತೆ ಕಂಡುಬಂದಿದೆ.
Published on
ಹಾಡಹಗಲೇ ಚಿರತೆಗಳು ಓಡಾಡುತ್ತಿವೆ. ಮನೆಯಿಂದ ಹೊರಬರಲು ಜನರು ಭಯಪಡುತ್ತಿದ್ದಾರೆ. ಕೆಲವರು ಮೊಬೈಲ್‌ಗಳಲ್ಲಿ ಚಿರತೆ ಫೊಟೋ ಕ್ಲಿಕ್ಕಿಸಿಕೊಂಡಿದ್ದಾರೆ. ಸ್ಥಳೀಯರು ಅರಣ್ಯ ಅಧಿಕಾರಿಗಳಿಗೆ ನೀಡಿದ ದೂರಿನನ್ವಯ ಚಿರತೆ ಸೆರೆ ಹಿಡಿಯಲು ಬೋನು ಇರಿಸಿದ್ದಾರೆ. ಮಂಗಳವಾರ ಸಂಜೆ 7 ಗಂಟೆಗೆ ದೊಡ್ಡುಪಲ್ಕೆ, ಗೋಶಾಲೆ ಪರಿಸರದಲ್ಲಿ ಹಲವರಿಗೆ ಚಿರತೆ ಕಾಣಿಸಿಕೊಂಡಿತ್ತು. ಚಿರತೆಯೊಂದು ಸುಮಾರು 3 ಗಂಟೆ ಒಂದೇ ಕಡೆಯಲ್ಲಿ ಇತ್ತು. ಚಿರತೆ ಕಂಡಿರುವುದಾಗಿ ಅಧಿಕಾರಿಗಳು ಹೇಳಿದ್ದಾರೆ. ಬೋನು ಇಟ್ಟರೆ ಸಾಲದು, ಆದಷ್ಟು ಶೀಘ್ರ ಚಿರತೆ ಸೆರೆ ಹಿಡಿಯಲು ಕ್ರಮ ಕೈಗೊಳ್ಳಬೇಕು ಎಂದು ಸ್ಥಳೀಯರು ಆಗ್ರಹಿಸಿದ್ದಾರೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net