ವಾಹನ ಡಿಕ್ಕಿಯಾಗಿ ಚಿರತೆ ಬೆಕ್ಕು ಸಾವು

ಚಿರತೆ ಬೆಕ್ಕು ಸಾವಿಗೀಡಾಗಿರುವುದು
ಚಿರತೆ ಬೆಕ್ಕು ಸಾವಿಗೀಡಾಗಿರುವುದು
Published on

ಕಾಸರಗೋಡು: ಚಿರತೆ ಮರಿಯನ್ನು ಹೋಲುವ ಅಪರೂಪದ ಪ್ರಾಣಿಯೊಂದು ಆದೂರಿನ ಆಲಂತಡ್ಕದಲ್ಲಿ ವಾಹನ ಡಿಕ್ಕಿಯಾಗಿ ಮೃತಪಟ್ಟಿದೆ. ಸ್ಥಳೀಯರು ‘ಚಿರತೆ ಮರಿ’ ಎಂದು ಸಂಶಯಿಸಿ ಆತಂಕಕ್ಕೀಡಾಗಿದ್ದರು. ಸ್ಥಳಕ್ಕಾಗಮಿಸಿದ ಅರಣ್ಯಾಧಿಕಾರಿಗಳು ಇದನ್ನು ‘ಚಿರತೆ ಬೆಕ್ಕು’ ಎಂದು ಗುರುತಿಸಿದ್ದಾರೆ. ಗುರುವಾರ ನಸುಕಿಗೆ ಚಿರತೆ ಬೆಕ್ಕು ರಸ್ತೆಯಲ್ಲಿ ಪತ್ತೆಯಾಗಿದೆ. ವಾಹನ ಡಿಕ್ಕಿಯಾಗಿ ಚಿರತೆ ಮರಿ ಸತ್ತಿದ್ದು, ಇದರ ತಾಯಿ ಆಸುಪಾಸಿನಿಂದ ಆಗಮಿಸುವ ಸಾಧ್ಯತೆ ಇದೆ ಎಂದು ಸ್ಥಳೀಯರು ಆತಂಕಕ್ಕೊಳಗಾಗಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net