ಕುಂಡೂರು ಉರುಸ್‌ಗೆ ಡಿಕೆಶಿ ಆಗಮನ : ಸ್ಪೀಕರ್ ಯು.ಟಿ.ಖಾದರ್

ಕುಂಡೂರು ಉರುಸ್ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿದರು.
ಕುಂಡೂರು ಉರುಸ್ ಪ್ರಯುಕ್ತ ನಡೆದ ಪೂರ್ವಭಾವಿ ಸಭೆಯಲ್ಲಿ ವಿಧಾನಸಭಾಧ್ಯಕ್ಷ ಯು.ಟಿ.ಖಾದರ್ ಮಾತನಾಡಿದರು.
Published on

ಪ್ರಮುಖ ಮುಖ್ಯಾಂಶಗಳು

  • ಕುಂಡೂರು ಉರುಸ್ ಪೂರ್ವಭಾವಿ ಸಭೆ
  • ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಆಗಮಿಸುವ ಹಿನ್ನೆಲೆ
  • ಸಾರ್ವಜನಿಕರಿಗೆ ಸಮಸ್ಯೆಯಾಗದಂತೆ ಕ್ರಮ
ಸ್ಪೀಕರ್ ಯು.ಟಿ.ಖಾದರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ಕೊನೆಯ ಎರಡು ದಿನಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಸೇರಲಿದ್ದು ಸಾರ್ವಜನಿಕರಿಗೆ ಯಾವುದೇ ಸಮಸ್ಯೆ ಬರದಂತೆ ನೋಡಿಕೊಳ್ಳಬೇಕು. ಅಧಿಕಾರಿಗಳು ಕಚೇರಿಗೆ ಸೀಮಿತವಾಗದೆ ಗ್ರಾಮೀಣ ಭಾಗಕ್ಕೆ ಹೋದಾಗ ಅಲ್ಲಿನ ಸಂಸ್ಕೃತಿಯ ಅರಿವು ಮೂಡುತ್ತದೆ ಎಂದು ತಿಳಿಸಿದರು.
ಮಸೀದಿಯ ಅಧ್ಯಕ್ಷ ಅಬೂಬಕ್ಕರ್ ಸಿದ್ದೀಕ್ ಸ್ವಾಗತ್, ಉಪಾಧ್ಯಕ್ಷ ಮುಹಮ್ಮದ್ ಬಾರ್ದಡ್ಕ, ಅಂಬ್ಲಮೊಗರು ಗ್ರಾ.ಪಂ. ಅಧ್ಯಕ್ಷ ಇಕ್ಬಾಲ್ ಎಸ್.ಎಂ., ಸದಸ್ಯ ಸುಭೋದ್ ಶೆಟ್ಟಿ, ಉಳ್ಳಾಲ ತಾಲೂಕು ತಹಸೀಲ್ದಾರ್ ಪ್ರಶಾಂತ್ ಪಾಟೀಲ್, ತಾ.ಪಂ. ಮುಖ್ಯ ಕಾರ್ಯನಿರ್ವಹಣಾಧಿಕಾರಿ ಗುರುದತ್, ಮೆಸ್ಕಾಂ ಸಹಾಯಕ ಕಾರ್ಯನಿರ್ವಾಹಕ ಅಧಿಕಾರಿ ದಯಾನಂದ, ಕ್ಷೇತ್ರ ಶಿಕ್ಷಣಾಧಿಕಾರಿ ಈಶ್ವರ್ ಎಚ್.ಆರ್., ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಶೈಲಾ, ಕಂದಾಯ ನಿರೀಕ್ಷಕ ಪ್ರಮೋದ್ ಕುಮಾರ್, ಲೋಕೋಪಯೋಗಿ ಇಲಾಖೆಯ ಕಿರಿಯ ಅಭಿಯಂತ ದಾಸ್ ಪ್ರಕಾಶ್, ಆಹಾರ ನಿರೀಕ್ಷಕ ಮಹಮ್ಮದ್ ರಫೀಕ್, ಟ್ರಾಫಿಕ್ ಎಸಿಪಿ ನಜ್ಮಾ ಫಾರೂಕಿ, ಉಪವಿಭಾಗ ಎಸಿಪಿ ವಿಜಯಕ್ರಾಂತಿ, ಅಗ್ನಿಶಾಮಕ ದಳದ ಹರಿಶ್ಚಂದ್ರ, ಪಿಡಿಒ ಅಬ್ದುಲ್ ಖಾದರ್, ಅಲ್ಪಸಂಖ್ಯಾತ ಇಲಾಖೆ ಕಲ್ಯಾಣಾಧಿಕಾರಿ ಮಂಜುನಾಥ್, ಉಳ್ಳಾಲ ಆರೋಗ್ಯಾಧಿಕಾರಿ ಡಾ.ಸುಜಯ ಭಂಡಾರಿ ಮೊದಲಾದವರು ಉಪಸ್ಥಿತರಿದ್ದರು.
ನುಸ್ರತುಲ್ ಇಸ್ಲಾಂ ಸಮಿತಿಯ ಅಧ್ಯಕ್ಷ ರಫೀಕ್ ಎಸ್.ಎಂ. ಸ್ವಾಗತಿಸಿದರು. ಮಸೀದಿಯ ಖತೀಬ್ ಅಶ್ರಫ್ ಫೈಝಿ ಅರ್ಕಾನ ಅಲ್ ಮುರ್ಶಿದಿ ವಂದಿಸಿದರು.
"

ಕರಾವಳಿ ಉತ್ಸವ ಹಿನ್ನೆಲೆಯಲ್ಲಿ ಜ.10ರಂದು ತಣ್ಣೀರುಬಾವಿ ಸಹಿತ ಮೂರು ಕಡೆ ವಿವಿಧ ಕಾರ್ಯಕ್ರಮಗಳಿದ್ದು ಬೆಳಗ್ಗೆ ಮೂರು ಗಂಟೆಯಿಂದ ಬಂದೋಬಸ್ತ್ ಆರಂಭವಾಗಲಿದೆ. ನರಿಂಗಾನ ಕಂಬಳಕ್ಕೂ ಡಿಸಿಎಂ ಬರುವುದರಿಂದ ಜೀರೋ ಟ್ರಾಫಿಕ್ ವ್ಯವಸ್ಥೆ ಮಾಡಬೇಕಾಗುತ್ತದೆ. ಹೆಚ್ಚಿನ ಸ್ವಯಂಸೇವಕರ ಅವಶ್ಯಕತೆಯಿದ್ದು ತರಬೇತಿ ನೀಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net