ಕುಮಾರಯಾತ್ರೆ’ಗೆ ದಿನಗಣನೆ ಶುರು : 10ರಂದು ಕುಮಾರಪರ್ವತದಲ್ಲಿ ಪೂಜೆ ಧಾರ್ಮಿಕ ವಿಧಿವಿಧಾನ

ಕುಮಾರ ಪರ್ವತದಲ್ಲಿರುವ ಕುಮಾರಪಾದ
ಕುಮಾರ ಪರ್ವತದಲ್ಲಿರುವ ಕುಮಾರಪಾದ
Published on

ಪಾದುಕೆ ಇಲ್ಲದೆ ಪಾದಯಾತ್ರೆ

ಕುಕ್ಕೆ-ಕುಮಾರಪರ್ವತಕ್ಕೆ ಪವಿತ್ರ ಸಂಬಂಧ

ವಿಜೃಂಭಣೆಯ ಆಚರಣೆ

ಈಗಿನ ಪ್ರಧಾನ ಅರ್ಚಕ ವೇ.ಮೂ.ಸೀತಾರಾಮ ಯಡಪಡಿತ್ತಾಯ 2003ರಿಂದ ನಿರಂತರವಾಗಿ ಕುಮಾರಪರ್ವತಕ್ಕೆ ತೆರಳಿ ಪೂಜೆ ನೆರವೇರಿಸುತ್ತಾ ಬರುತ್ತಿದ್ದಾರೆ. ಈ ಹಿಂದೆ ಅರ್ಚಕರೇ ಸ್ವತಃ ಪರ್ವತದಲ್ಲಿ ಪೂಜೆಗೆ ವ್ಯವಸ್ಥೆ ಮಾಡುತ್ತಿದ್ದರು. ಆದರೆ ನಂತರ ಶ್ರೀ ದೇಗುಲದ ಆಡಳಿತ ಮಂಡಳಿಯು ಕುಮಾರಯಾತ್ರೆ ಎಂದು ನಾಮಕರಣ ಮಾಡಿ ಈ ಧಾರ್ಮಿಕ ಕಾರ್ಯವನ್ನು ನೆರವೇರಿಸಲು ಆರಂಭಿಸಿತು.

ತಲೆತಲಾಂತರದಿಂದ ನಡೆದು ಬಂದ ಸಂಪ್ರದಾಯ. 2003ರಿಂದ ಕುಮಾರಪರ್ವತಕ್ಕೆ ಹೋಗಿ ಪೂಜೆ ನೆರವೇರಿಸುತ್ತಿದ್ದೇನೆ. ಶುದ್ಧ ಷಷ್ಠಿಯಂದು ಬ್ರಹ್ಮರಥೋತ್ಸವ ನಡೆದರೆ ಬಹುಳ ಷಷ್ಠಿಯಂದು ಕುಮಾರಪರ್ವತದಲ್ಲಿ ಪೂಜೆ ನಡೆಯುತ್ತದೆ. ಕುಕ್ಕೆ ಕ್ಷೇತ್ರಕ್ಕೆ ಮತ್ತು ಕುಮಾರಪರ್ವತಕ್ಕೆ ಸಂಬಂಧವಿದೆ ಎಂದು ಅಷ್ಟಮಂಗಲ ಪ್ರಶ್ನೆಯಲ್ಲಿ ಕಂಡುಬಂದಿದೆ. ಆದುದರಿಂದ ತಲೆತಲಾಂತರದಿಂದ ನಡೆದು ಬಂದ ಸಂಪ್ರದಾಯವನ್ನು ಪಾಲಿಸುತ್ತಿದ್ದೇವೆ. ಬಹುಳ ಷಷ್ಠಿಯಂದು ಕುಮಾರಪರ್ವತಕ್ಕೆ ತೆರಳಿ ಅಲ್ಲಿರುವ ಕುಮಾರಪಾದಕ್ಕೆ ಪೂಜೆ ನೆರವೇರಿಸಿ ಅಭಿಷೇಕ, ಅರ್ಚನೆ ನೆರವೇರಿಸಲಾಗುತ್ತದೆ.

ಪವಿತ್ರ ಕುಮಾರಪರ್ವತ
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net