ಕುಕ್ಕೆಯಲ್ಲಿ ಗೋಪುರ ನಡಾವಳಿ ಸಂಪನ್ನ : ಪವಿತ್ರ ಮತ್ಸ್ಯಗಳಿಗೆ ಆಹಾರ ನೀಡಿದ ಪುರುಷರಾಯ ದೈವ

ಪುರುಷರಾಯ ದೈವವು ಕುಮಾರಧಾರಾದಲ್ಲಿ ಪವಿತ್ರ ಮೀನುಗಳಿಗೆ ಆಹಾರ ನೀಡಿತು.
ಪುರುಷರಾಯ ದೈವವು ಕುಮಾರಧಾರಾದಲ್ಲಿ ಪವಿತ್ರ ಮೀನುಗಳಿಗೆ ಆಹಾರ ನೀಡಿತು.
Published on

ಸುಬ್ರಹ್ಮಣ್ಯ: ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇಗುಲದಲ್ಲಿ ಜಾತ್ರಾ ಮಹೋತ್ಸವ ಬಳಿಕ ರಕ್ಷಣಾ ದೈವಗಳಿಗೆ ಕೊಡುವ ಕಟ್ಟುಕಟ್ಟಳೆಯ ಕೋಲ ಮತ್ತು ಪರ್ವಗಳನ್ನೊಳಗೊಂಡ ಗೋಪುರ ನಡಾವಳಿ ಮಂಗಳವಾರ ರಾತ್ರಿಯಿಂದ ಬುಧವಾರ ಬೆಳಗ್ಗೆವರೆಗೆ ನಡೆಯಿತು.

ಬುಧವಾರ ಬೆಳಗ್ಗೆ ಕ್ಷೇತ್ರದ ಪುರುಷರಾಯ ದೈವ ಕುಮಾರಧಾರಾ ನದಿಗೆ ತೆರಳಿ ಮತ್ಸ್ಯತೀರ್ಥದ ಮೀನುಗಳಿಗೆ ಆಹಾರ ನೀಡಿ ಹರಸಿತು. ಮಂಗಳವಾರ ರಾತ್ರಿ ದೈವಗಳ ಭಂಡಾರ ತೆಗೆಯಲಾಯಿತು. ಬಳಿಕ ಪುರೋಹಿತ ನಾರಾಯಣ ಭಟ್ ನೂಚಿಲ ಪ್ರಸಾದ ನೀಡುವುದರೊಂದಿಗೆ ದೈವಗಳ ನೇಮ ನಡೆಯಿತು.

ಗೋಪುರದ ಧರ್ಮಸಮ್ಮೇಳನ ಮಂಟಪದಲ್ಲಿ ಕಾಚುಕುಜುಂಬ, ತೇರಕುಮಾರ ದೈವಗಳ ನೇಮ ನಡಾವಳಿ ನಡೆಯಿತು. ದೇಗುಲದ ಒಳಾಂಗಣಕ್ಕೆ ದೈವದ ಭಂಡಾರ ಪ್ರದಕ್ಷಿಣೆ ಹಾಕಿದ ಬಳಿಕ ಕ್ಷೇತ್ರ ರಕ್ಷಕಿ ಹೊಸಳಿಗಮ್ಮ ದೈವದ ನೇಮ ನೆರವೇರಿತು. ಆ ಬಳಿಕ ಉದ್ರಾಂಡಿ(ಉರಿಮಾರಿ) ಹಾಗೂ ಪೊಟ್ಟಭೂತಗಳಿಗೆ ನೇಮ, ಬುಧವಾರ ಮುಂಜಾನೆ ಪಂಜುರ್ಲಿ ದೈವದ ನೇಮ ಜರುಗಿತು.

ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ, ಕಾರ್ಯನಿರ್ವಹಣಾಧಿಕಾರಿ ಅರವಿಂದ ಅಯ್ಯಪ್ಪ ಸುತಗುಂಡಿ, ವ್ಯವಸ್ಥಾಪನಾ ಸಮಿತಿ ಸದಸ್ಯ ಅಶೋಕ್ ನೆಕ್ರಾಜೆ, ಮಾಸ್ಟರ್‌ಪ್ಲ್ಯಾನ್ ಸಮಿತಿ ಸದಸ್ಯರಾದ ಪವನ್ ಎಂ.ಡಿ., ಲೋಲಾಕ್ಷ ಕೈಕಂಬ, ಸತೀಶ್ ಕೂಜುಗೋಡು, ಹೆಬ್ಬಾರ್ ಪ್ರಸನ್ನ ಭಟ್, ಸಿಬ್ಬಂದಿ ಲೋಕೇಶ್ ಎಂ.ಆರ್., ಭಾಸ್ಕರ ಅರ್ಗುಡಿ, ಪ್ರಮುಖರಾದ ದಯಾನಂದ ದೋಣಿಮನೆ, ನಿಶಾಂತ್ ನೂಚಿಲ ಮತ್ತಿತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net