ಮೈಸೂರು ಸಂಸ್ಥಾನದ ಮಹಾರಾಜ ಯದುವೀರ ಕೃಷ್ಣದತ್ತ ಚಾಮರಾಜ ಒಡೆಯರ್ ಮಂಗಳವಾರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿದರು. ಪ್ರಮುಖರಾದ ಹರೀಶ್ ಎಸ್.ಇಂಜಾಡಿ, ಎಸ್.ಜೆ.ವೈ.ರಾಜ್, ಕೆ.ಎಂ.ಗೋಪಿನಾಥ್ ಮತ್ತಿತರರಿದ್ದರು.
Published on:
Copied
Follow Us
ಕ್ಷೇತ್ರಕ್ಕೆ ಆಗಮಿಸಿದ ಅವರಿಗೆ ಪೂರ್ಣಕುಂಭ ಸ್ವಾಗತ ಕೋರಲಾಯಿತು. ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಹರೀಶ್ ಎಸ್.ಇಂಜಾಡಿ ಹಾರ ಹಾಕಿ ಬರಮಾಡಿಕೊಂಡರು. ಬಳಿಕ ದೇವಳದ ಗೋಪುರದ ಬಳಿಯಿಂದ ಪೂರ್ಣಕುಂಭ, ಮಂಗಳವಾದ್ಯ ಮತ್ತು ಋತ್ವಿಜರ ಮಂತ್ರೋಷದೊಂದಿಗೆ ದೇವಳಕ್ಕೆ ಕರೆದೊಯ್ಯಲಾಯಿತು.
ಮಹಾರಾಜರಿಂದ ಪ್ರಾರ್ಥನೆ
ದೇವರ ದರುಶನ ಮಾಡಿದ ಮಹಾರಾಜರು ಕುಕ್ಕೆ ಶ್ರೀ ಸುಬ್ರಹ್ಮಣ್ಯನಿಗೆ ವಿಶೇಷ ಪೂಜೆ ಸಲ್ಲಿಸಿ, ದೇಶದ ಸೌಹಾರ್ದ, ಜನತಾ ಕಲ್ಯಾಣ ಹಾಗೂ ಶಾಂತಿಗಾಗಿ ಪ್ರಾರ್ಥನೆ ಸಲ್ಲಿಸಿದರು. ದೇವಳದ ಅರ್ಚಕರು ಮಹಾಪ್ರಸಾದ ನೀಡಿದರು. ಬಳಿಕ ಹೊಸಳಿಗಮ್ಮನ ದರುಶನ ಪಡೆದ ಅವರು ದೇವಳದಲ್ಲಿ ಉಪಹಾರ ಸ್ವೀಕರಿಸಿದರು.
ದೇವಳದ ಸಹಾಯಕ ಕಾರ್ಯನಿರ್ವಹಣಾಧಿಕಾರಿ ಎಸ್.ಜೆ.ವೈ.ರಾಜ್, ಕಚೇರಿ ಅಧೀಕ್ಷಕ ಕೆ.ಎಂ.ಗೋಪಿನಾಥ್, ಶಿಷ್ಟಾಚಾರಾಧಿಕಾರಿ ಜಯರಾಮ ರಾವ್, ಶಿಷ್ಟಾಚಾರ ವಿಭಾಗದ ಪ್ರಮೋದ್ ಕುಮಾರ್ ಎಸ್. ಮತ್ತಿತರರು ಉಪಸ್ಥಿತರಿದ್ದರು.