

ಸಾಂಪ್ರದಾಯಿಕ ಕಲೆ ಹಿರಿಯರಿಂದ ಒಲಿದು ಬಂದಿದೆ. ಹಿರಿಯರ ಮಾರ್ಗದರ್ಶನದಂತೆ ರಥ ಕಟ್ಟುವ ಕಾಯಕವನ್ನು ಮಾಡುತ್ತಿದ್ದೇವೆ. ನಮ್ಮ ತಂಡದಲ್ಲಿ ಯುವಕರು ಮತ್ತು ಹಿರಿಯರು ಸೇರಿ ಸೇವೆ ಸಲ್ಲಿಸುತ್ತಿದ್ದೇವೆ. ಇದು ದೇವರ ಸೇವೆಗೆ ದೊರೆತ ಅದ್ಭುತ ಅವಕಾಶವೆಂದು ಭಾವಿಸಿ ರಥ ನಿರ್ಮಾಣ ಕಾರ್ಯದಲ್ಲಿ ತೊಡಗಿಸಿಕೊಂಡಿದ್ದೇವೆ. ಹಿರಿಯರಿಂದ ಕಲಿತ ವಿದ್ಯೆಯನ್ನು ಯುವಕರಾದ ನಾವು ಮುಂದುವರಿಸುತ್ತಾ ಬಂದಿದ್ದೇವೆ.