

ಪ್ರಮುಖ ಮುಖ್ಯಾಂಶಗಳು
ಹೆದ್ದಾರಿ ಕಾಮಗಾರಿಯಿಂದ ದೇವಸ್ಥಾನಕ್ಕೆ ಬರುವ ಭಕ್ತರಿಗೆ ಅನನುಕೂಲವಾಗಲಿದೆ. ರಾಜಗೋಪುರ ಉಳಿಸಲು ಆಡಳಿತ ಮಂಡಳಿ ಎಲ್ಲ ರೀತಿಯ ಪ್ರಯತ್ನ ಮಾಡಿದ್ದರೂ, ಫಲಕಾರಿಯಾಗಿಲ್ಲ. ದೇವಸ್ಥಾನ ಸರ್ಕಾರದ್ದಾಗಿದ್ದರೂ ಬರುವ ಸಾರ್ವಜನಿಕರಿಗೆ ಇಲ್ಲಿ ಯಾವುದೇ ರೀತಿಯ ತೊಂದರೆಯಾಗಬಾರದು. ಆ ನಿಟ್ಟಿನಲ್ಲಿ ಯೋಜನೆಯಲ್ಲಿ ತುಸು ಬದಲಾವಣೆಯಾದರೆ ಉತ್ತಮ.
ನೂತನ ರಾಜಗೋಪುರ ನಿರ್ಮಾಣ ಆಗಲಿದೆ. ರಸ್ತೆಯಲ್ಲಿ ಬ್ರಹ್ಮರಥ ಎಳೆಯಲು ಸಾಕಷ್ಟು ಸ್ಥಳಾವಕಾಶ ಇರುವಂತೆ ನೋಡಿಕೊಳ್ಳಬೇಕಾಗುತ್ತದೆ. ಯೋಜನೆಯ ಹಿಂದಿನ ನೀಲಿನಕ್ಷೆಯಲ್ಲಿ ತುಸು ಬದಲಾವಣೆ ಮಾಡಿದ್ದರಿಂದ ಸದ್ಯ ರಾಜಗೋಪುರ ಮಾತ್ರ ಕಳೆದುಕೊಳ್ಳುವಂತಾಗಿದೆ. ಇಲ್ಲೊಂದು ಅಂಡರಪಾಸ್ ನಿರ್ಮಾಣವಾಗಲಿದ್ದು, ಭಕ್ತರು ಮತ್ತು ವಾಹನಗಳ ಸಂಚಾರಕ್ಕೆ ಅನುಕೂಲವಾಗಲಿದೆ. ದೇವಸ್ಥಾನದ ಬಲ ಮತ್ತು ಎಡ ಭಾಗದಲ್ಲಿ 300 ಮೀಟರ್ ಸರ್ವೀಸ್ ರಸ್ತೆ ನಿರ್ಮಿಸಲಾಗುತ್ತದೆ.
ಹೊಸ ರಾಜಗೋಪುರ ಅತಿ ಸುಂದರವಾಗಿ ಮೂಡಿ ಬರಲಿದೆ. ಪರಿಹಾರದ ಮೊತ್ತದಲ್ಲಿ ರಾಜಗೋಪುರದ ಸಹಿತ ದೇವಸ್ಥಾನದ ಇತರ ಅಭಿವೃದ್ಧಿ ಕೆಲಸಗಳು ನಡೆಯಲಿವೆ.
ಸುಂದರ ವಿನ್ಯಾಸದ ರಾಜಗೋಪುರ ನೆಲಸಮದಿಂದ ಬೇಸರವಾಗಿದೆ. ಸರ್ವೀಸ್ ರಸ್ತೆ ಮತ್ತು ಅಂಡರ್‌ಪಾಸ್ ನಿರ್ಮಾಣಕ್ಕೆ ಆದ್ಯತೆ ನೀಡಲಾಗಿದೆ. ಅಭಿವೃದ್ಧಿ ಎಂದರೆ ಸ್ವಲ್ಪ ಕಳೆದುಕೊಳ್ಳಬೇಕಾಗುತ್ತದೆ