ಗಮನ ಸೆಳೆದ ಕುಡ್ಲ ಶ್ವಾನ ಪ್ರದರ್ಶನ

ಗಮನ ಸೆಳೆದ ಕುಡ್ಲ ಶ್ವಾನ ಪ್ರದರ್ಶನ
ಗಮನ ಸೆಳೆದ ಕುಡ್ಲ ಶ್ವಾನ ಪ್ರದರ್ಶನ
Published on
ಮಂಗಳೂರು: ಕರಾವಳಿ ಉತ್ಸವದ ಪ್ರಯುಕ್ತ ದ.ಕ. ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ ಹಾಗೂ ಪಶುಪಾಲನಾ ಮತ್ತು ಪಶು ವೈದ್ಯಕೀಯ ಸೇವಾ ಇಲಾಖೆಯ ಸಹಯೋಗದಲ್ಲಿ ಲಾಲ್‌ಬಾಗ್‌ನ ಕರಾವಳಿ ಉತ್ಸವ ಮೈದಾನದಲ್ಲಿ ಭಾನುವಾರ ನಡೆದ ಕುಡ್ಲ ಶ್ವಾನ ಪ್ರದರ್ಶನ ಗಮನ ಸೆಳೆಯಿತು.
ವಿವಿಧ ಜಿಲ್ಲೆಗಳಿಂದ ಸುಮಾರು 25 ವಿವಿಧ ತಳಿಯ 300ಕ್ಕಿಂತಲೂ ಅಧಿಕ ಶ್ವಾನಗಳು ಪ್ರದರ್ಶನದಲ್ಲಿ ಭಾಗವಹಿಸಿದ್ದವು. ಈ ಬಾರಿ ಶ್ವಾನ ಪ್ರದರ್ಶನಕ್ಕೆ ಆನ್‌ಲೈನ್ ಮೂಲಕ ನೋಂದಣಿ ಮಾಡಲಾಗಿತ್ತು.
ಪ್ರದರ್ಶನದಲ್ಲಿ ಭಾಗವಹಿಸಿದ ಶ್ವಾನಗಳನ್ನು ತಳಿವಾರು, ಪ್ರಾಯವಾರು ಪ್ರತ್ಯೇಕಿಸಿ ಅವುಗಳ ಆರೋಗ್ಯ ಕೌಶಲ, ಬೆಳವಣಿಗೆ ಮೊದಲಾದ ಆಯಾಮಗಳಲ್ಲಿ ವಿಂಗಡಿಸಲಾಗಿತ್ತು. 3ರಿಂದ 6 ತಿಂಗಳ ಮರಿಗಳ ವಿಭಾಗ, 6ರಿಂದ 12 ತಿಂಗಳ ಮರಿಗಳ ವಿಭಾಗ ಹಾಗೂ ತಳಿವಾರು 12 ತಿಂಗಳು ಮೇಲ್ಪಟ್ಟು ವಿಭಾಗಗಳಲ್ಲಿ ಸ್ಪರ್ಧೆ ನಡೆಯಿತು. ಪೊಲೀಸ್ ಶ್ವಾನದಳದಿಂದ ವಿಶೇಷ ಪ್ರದರ್ಶನ ನಡೆಯಿತು.
ಸಚಿವ ದಿನೇಶ್ ಗುಂಡೂರಾವ್ ಭೇಟಿ: ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಸಂಜೆ ಶ್ವಾನ ಪ್ರದರ್ಶನಕ್ಕೆ ಭೇಟಿ ನೀಡಿ ಮೆಚ್ಚುಗೆ ವ್ಯಕ್ತಪಡಿಸಿದರು.
ಡಿಸಿ, ಸಿಇಒ ಶ್ವಾನಗಳು ಪ್ರದರ್ಶನದಲ್ಲಿ ಭಾಗಿ
ಶ್ವಾನ ಪ್ರದರ್ಶನದಲ್ಲಿ ಜಿಲ್ಲಾಧಿಕಾರಿ ದರ್ಶನ್ ಎಚ್.ವಿ. ಅವರ ಸಾಕು ಶ್ವಾನಗಳಾದ ಟೋರಾ ಹಾಗೂ ಯುಕಿ ಮತ್ತು ಜಿ.ಪಂ. ಸಿಇಒ ವಿನಾಯಕ ನರ್ವಾಡೆ ಅವರ ಹೇಝಲ್ ಹೆಸರಿನ ಶ್ವಾನಗಳು ಭಾಗವಹಿಸಿದ್ದವು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net