ವಿವಿಯಿಂದ ಲಕ್ಷಾಂತರ ತೆರಿಗೆ ಬಾಕಿ : ಕೊಣಾಜೆ ಗ್ರಾಮಸಭೆಯಲ್ಲಿ ಆಕ್ರೋಶ ಕಲುಷಿತ ನೀರಿನ ಸಮಸ್ಯೆ ಪರಿಹಾರಕ್ಕೆ ಆಗ್ರಹ

  ಕೊಣಾಜೆ ಗ್ರಾಮಸಭೆಯಲ್ಲಿ ಅಧ್ಯಕ್ಷೆ ಗೀತಾ ಡಿ.ಕುಂದರ್ ಮಾತನಾಡಿದರು.
ಕೊಣಾಜೆ ಗ್ರಾಮಸಭೆಯಲ್ಲಿ ಅಧ್ಯಕ್ಷೆ ಗೀತಾ ಡಿ.ಕುಂದರ್ ಮಾತನಾಡಿದರು.
Published on

ವಿವಿ ತಾತ್ಸಾರ

ವಿಶ್ವಮಂಗಳ ಶಾಲೆಯಿಂದ ತೆರಿಗೆ ಏಕೆ ಬರುತ್ತಿಲ್ಲ, ಅವರು ಶುಲ್ಕ ಪಡೆಯುತ್ತಾರೆಯೇ ಹೊರತು ಪುಕ್ಕಟ್ಟೆ ಶಿಕ್ಷಣ ನೀಡುತ್ತಿಲ್ಲ. ಈಗಲೇ ಕಟ್ಟುನಿಟ್ಟಿನ ನಿರ್ಣಯ ಕೈಗೊಂಡು ಸಮಸ್ಯೆ ಸರಿಪಡಿಸಿ, ಮುಂದಿನ ಗ್ರಾಮಸಭೆಯಲ್ಲಿ ಈ ವಿಷಯ ಪ್ರಸ್ತಾಪವಾಗಬಾರದು ಎಂದು ಗ್ರಾಮಸ್ಥರು ಆಗ್ರಹಿಸಿದರು. ಒಂದೂವರೆ ವರ್ಷಗಳಿಂದ ಕಾನೂನು ಪ್ರಕಾರ ನೋಟಿಸ್ ನೀಡಲಾಗಿದೆ, ವಿಶ್ವಮಂಗಳ ಶಾಲೆ ವಿವಿ ಅಧೀನದಲ್ಲಿದೆ. ತೆರಿಗೆ ಪಾವತಿಸುವುದಿಲ್ಲ ಏನು ಬೇಕಾದರೂ ಮಾಡಿ ಎಂದು ವಿವಿಯವರು ತಾತ್ಸಾರವಾಗಿ ಮಾತನಾಡುತ್ತಾರೆ ಎಂದು ಅಧ್ಯಕ್ಷರು ಮಾಹಿತಿ ನೀಡಿದರು. ಗ್ರಾಪಂನಿಂದ ವಿವಿ ಕುಲಾಧಿಪತಿ, ರಾಜ್ಯಪಾಲರಿಗೆ ಪತ್ರ ಬರೆಯಬೇಕು ಎಂದು ಗ್ರಾಮಸ್ಥರು ಸಲಹೆ ನೀಡಿದರು.

ಗ್ರಾಮಸಭೆಗೆ ಸದಸ್ಯರು ಅನಗತ್ಯ

ಎಲ್ಲ ಇಲಾಖೆಯವರು, ಗ್ರಾಪಂ ಎಲ್ಲ ಸದಸ್ಯರು ಇದ್ದಾರಾ? 10.30ಗೆ ಸಭೆ ನಿಗದಿಪಡಿಸಿ ಆರಂಭಿಸಿದ್ದು ಎಷ್ಟು ಗಂಟೆಗೆ? ನೋಡೆಲ್ ಅಧಿಕಾರಿ ಬಂದಿದ್ದು ಎಷ್ಟು ಗಂಟೆಗೆ ಎಂದು ಯಾದವ ಪ್ರಶ್ನಿಸಿದರು. ನನಗೆ ವಾಹನದ ವ್ಯವಸ್ಥೆ ಇಲ್ಲ. ನಾಲ್ಕು ಬಸ್ ಬದಲಾಯಿಸಿ ಬಂದಿದ್ದು ಸಮಸ್ಯೆ ಅರ್ಥಮಾಡಿಕೊಳ್ಳಿ ಎಂದು ನೋಡೆಲ್ ಅಧಿಕಾರಿ ಹೇಳಿದರು. ಗ್ರಾಮಸಭೆಯಲ್ಲಿ ಸದಸ್ಯರು ಕಡ್ಡಾಯವಾಗಿ ಹಾಜರಿರಬೇಕಿಲ್ಲ, ಅಧ್ಯಕ್ಷರು ಇಲ್ಲದಿದ್ದರೆ ಉಪಾಧ್ಯಕ್ಷರು ನಡೆಸಬಹುದು ಎಂದು ಪಿಡಿಒ ಮಾಹಿತಿ ನೀಡಿದರು. ಸಭೆ ನಿಗದಿತ ಸಮಯಕ್ಕಿಂತ 55 ನಿಮಿಷ ತಡವಾಗಿ ಆರಂಭಿಸಲಾಯಿತು. ಪುರುಷರಿಗಿಂತ ಮಹಿಳೆಯರೇ ಹೆಚ್ಚಾಗಿ ಭಾಗವಹಿಸಿದ್ದು ವಿಶೇಷ.

ಕಸ ಸುರಿಯುವ ಅಂಗಡಿಯವರು

ಸಂಪರ್ಕ ಕಲ್ಪಿಸಿದರೂ ನೀರಿಲ್ಲ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net