ಕೇಪು ಕೋಳಿ ಅಂಕ ಪ್ರಕರಣ ರದ್ದು CASE

Published on: 

ಪುತ್ತೂರು: ಕೇಪು ಉಳ್ಳಾಲ್ತಿ ದೈವಸ್ಥಾನದಲ್ಲಿ ಕಜಂಬು ಜಾತ್ರೋತ್ಸವದ ಬಳಿಕ ಜೂಜು ರಹಿತವಾಗಿ ನಡೆಯುವ ಮೂರು ದಿನಗಳ ಕೋಳಿ ಅಂಕದ ವಿಚಾರದಲ್ಲಿ ವಿಟ್ಲ ಠಾಣೆಯಲ್ಲಿ ದಾಖಲಾಗಿದ್ದ ಎರಡು ಪ್ರತ್ಯೇಕ ಪ್ರಕರಣಗಳನ್ನು ಹೈಕೋಟ್ ರದ್ದುಗೊಳಿಸಿದೆ.

೨೦೨೫ರ ಡಿಸೆಂಬರ್‌ನಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮುಂದಾಳುತ್ವದಲ್ಲಿ ಕೋಳಿ ಅಂಕ ನಡೆಸಲಾಗಿತ್ತು. ಈ ಮೂಲಕ ರಾಜಕೀಯ ಲಾಭ ಪಡೆದುಕೊಳ್ಳುವುದನ್ನು ಅರಿತು ಮಾರನೇ ದಿನ ಬಿಜೆಪಿ ಮಾಜಿ ಶಾಸಕ ಸಂಜೀವ ಮಠಂದೂರು ನೇತೃತ್ವದಲ್ಲಿ ಮತ್ತೆ ಕೋಳಿ ಅಂಕ ನಡೆದಿತ್ತು. ೨೦೨೫ರ ಡಿ.೨೦ರಂದು ಶಾಸಕ ಅಶೋಕ್ ಕುಮಾರ್ ರೈ ಸೇರಿ ೧೬ ಮಂದಿ ವಿರುದ್ಧ ಪ್ರಕರಣ ದಾಖಲಾಗಿದ್ದು, ಡಿ.೨೧ರಂದು ಮಾಜಿ ಶಾಸಕ ಸಂಜೀವ ಮಠಂದೂರು ಸೇರಿ ಸುಮಾರು ೨೦ ಮಂದಿ ಮೇಲೆ ಪ್ರಕರಣ ದಾಖಲಾಗಿತ್ತು. ವರ್ಷಂಪ್ರತಿ ಹರಕೆ ರೂಪದಲ್ಲಿ ನಡೆಯುವ ಕೋಳಿ ಅಂಕಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡದೆ, ಕೋಳಿ ಅಂಕ ನಡೆಸಿದವರನ್ನು ಬಂಽಸಿ, ಕೋಳಿಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿ ಗೊಂದಲ ಏರ್ಪಡಿಸಲಾಗಿತ್ತು. ಈ ಬಗ್ಗೆ ಪ್ರತ್ಯೇಕವಾಗಿ ಎರಡು ಕಡೆವರು ಹೈಕೋರ್ಟ್ ಮೆಟ್ಟಲೇರಿದ್ದು, ಎರಡೂ ಪ್ರಕರಣ ರದ್ದುಗೊಂಡಿದೆ.