ಚೆರ್ಕಳ- ಕಲ್ಲಡ್ಕ ಶೀಘ್ರ ಶಾಪಮುಕ್ತಿ!

ಚೆರ್ಕಳ- ಕಲ್ಲಡ್ಕ ನಡುವಿನ ಪಳ್ಳತ್ತಡ್ಕದಲ್ಲಿ ರಸ್ತೆ ಶಿಥಿಲಗೊಂಡಿರುವುದು.
ಚೆರ್ಕಳ- ಕಲ್ಲಡ್ಕ ನಡುವಿನ ಪಳ್ಳತ್ತಡ್ಕದಲ್ಲಿ ರಸ್ತೆ ಶಿಥಿಲಗೊಂಡಿರುವುದು.
Published on

ಪ್ರಮುಖ ಮುಖ್ಯಾಂಶಗಳು

  • ರಸ್ತೆ ಅಭಿವೃದ್ಧಿಗೆ ಕಿಫ್ ಬಿ 30.36 ಕೋಟಿ ಮಂಜೂರು
  • ಕಾಮಗಾರಿಗೆ ಹಸಿರು ನಿಶಾನೆ
  • ಫಲಿಸಿದ ಜನಾಗ್ರಹ
ಚೆರ್ಕಳ- ಕಲ್ಲಡ್ಕ ರಾಜ್ಯ ಹೆದ್ದಾರಿಯ ಉಕ್ಕಿನಡ್ಕ ಸನಿಹ ರಸ್ತೆಯಲ್ಲಿ ಉಂಟಾಗಿರುವ ಹೊಂಡಗಳಿಗೆ ಶಾಪಮೋಕ್ಷದ ದಿನ ಸಮೀಪಿಸುತ್ತಿದೆ.
ರಾಜ್ಯ ಲೋಕೋಪಯೋಗಿ ಇಲಾಖೆ ನಿರ್ಲಕ್ಷೃದಿಂದ ಚೆರ್ಕಳದಿಂದ ಉಕ್ಕಿನಡ್ಕವರೆಗಿನ ರಸ್ತೆ ಸಂಪೂರ್ಣ ಶಿಥಿಲಾವಸ್ಥೆಯಲ್ಲಿದ್ದು, ವಾಹನ ಚಾಲಕರು ಹಾಗೂ ಪ್ರಯಾಣಿಕರು ಜೀವ ಕೈಯಲ್ಲಿ ಹಿಡಿದು ಸಂಚರಿಸಬೇಕಾದ ಸ್ಥಿತಿ ದೂರಾಗುವ ದಿನ ಸಮೀಪಿಸಿದೆ. ರಸ್ತೆ ಅಭಿವೃದ್ಧಿಗೆ ಕೊನೆಗೂ ಸರ್ಕಾರ ‘ಕಿಫ್ ಬಿ’ ಮೂಲಕ 30.36 ಕೋಟಿ ರೂ. ಮಂಜೂರುಗೊಳಿಸಿದ್ದು, ಕಾಮಗಾರಿಗೆ ಹಸಿರು ನಿಶಾನೆ ತೋರಿಸಿದೆ.
ಈ ಹಿಂದೆ 40 ಲಕ್ಷ ರೂ. ವೆಚ್ಚದಲ್ಲಿ ತಾತ್ಕಾಲಿಕ ದುರಸ್ತಿ ನಡೆಸಲು ಸರ್ಕಾರ ಮುಂದಾಗುತ್ತಿದ್ದಂತೆ ನಾಗರಿಕರು ಎಚ್ಚೆತ್ತು ಇದಕ್ಕೆ ತಮ್ಮ ವಿರೋಧ ಸೂಚಿಸಿದ ಹಿನ್ನೆಲೆಯಲ್ಲಿ ಸಮಗ್ರ ಅಭಿವೃದ್ಧಿಗಾಗಿ 30.36 ಕೋಟಿ ರೂ. ಮೀಸಲಿರಿಸುವ ಮೂಲಕ ರಸ್ತೆ ಅಭಿವೃದ್ಧಿಯ ಕನಸು ಮತ್ತೆ ಚಿಗುರೊಡೆಯುವಂತಾಗಿದೆ. ಚೆರ್ಕಳದಿಂದ ಬದಿಯಡ್ಕವರೆಗೆ ಬೃಹತ್ ಹೊಂಡಗಳಿಗೆ ತೇಪೆ ಹಚ್ಚುವ ಕಾರ್ಯ ನಡೆದಿದ್ದರೂ ಅಲ್ಲಿಂದ ಮುಂದೆ ಉಕ್ಕಿನಡ್ಕವರೆಗೆ ರಸ್ತೆ ಸ್ಥಿತಿ ಅಯೋಮಯವಾಗಿದೆ.

ತೀವ್ರ ಸಮಸ್ಯೆ

ಸೇತುವೆಯೂ ಶಿಥಿಲ

ಚೆರ್ಕಳ- ಕಲ್ಲಡ್ಕ ರಸ್ತೆ ಚೆರ್ಕಳದಿಂದ ಉಕ್ಕಿನಡ್ಕವರೆಗೆ ಸಮಗ್ರ ಅಭಿವೃದ್ಧಿ ದೃಷ್ಟಿಯಿಂದ 30.36 ಕೋಟಿ ರೂ. ಮೊತ್ತದ ಯೋಜನೆಗೆ ಸರ್ಕಾರ ಅಂಗೀಕಾರ ನೀಡಿದೆ. ಆಡಳಿತಾತ್ಮಕ ಅನುಮತಿಯೊಂದಿಗೆ ತಾಂತ್ರಿಕ ಅನುಮತಿಯೂ ಲಭ್ಯವಾಗಿದ್ದು, ಟೆಂಡರ್ ಪ್ರಕ್ರಿಯೆ ಜಾರಿಯಲ್ಲಿದೆ. ವಿಧಾನಸಭಾ ಚುನಾವಣೆಗೆ ದಿನಾಂಕ ಘೋಷಣೆಗೂ ಮೊದಲು ಕಾಮಗಾರಿ ಆರಂಭಕ್ಕೆ ಅಗತ್ಯ ಕ್ರಮ ಕೈಗೊಳ್ಳಲಾಗುತ್ತಿದೆ. ಈ ಮಧ್ಯೆ ಪಳ್ಳತ್ತಡ್ಕ ಸೇತುವೆ ದುರಸ್ತಿ ಬಗ್ಗೆಯೂ ಸಂಬಂಧಪಟ್ಟ ವಿಭಾಗಕ್ಕೆ ಸೂಚನೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net