ಕನಸು ನನಸಾಗಿಸಲು ಪರಿಶ್ರಮ ನಿರಂತರವಾಗಿರಲಿ: ಗೋವಿಂದ ಬಾಬು ಪೂಜಾರಿ

ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಆಯೋಜಿಸಲಾಗಿದ್ದ "ಶ್ರದ್ಧಾ" - ಸ್ನಾತಕೋತ್ತರ ವಿದ್ಯಾರ್ಥಿಗಳ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಬುಧವಾರ ಗೋವಿಂದ ಬಾಬು ಪೂಜಾರಿ ಉದ್ಘಾಟಿಸಿದರು. ಪ್ರೊ. ಪಿ.ಎಲ್. ಧರ್ಮ, ಸ್ವಾಮಿ ಜಿತಕಾಮಾನಂದಜಿ, ಕ್ಯಾ. ಗಣೇಶ್ ಕಾರ್ಣಿಕ್, ಡಾ. ಎ. ಶ್ರೀನಿವಾಸ್ ರಾವ್ ಇದ್ದರು.
ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಆಯೋಜಿಸಲಾಗಿದ್ದ "ಶ್ರದ್ಧಾ" - ಸ್ನಾತಕೋತ್ತರ ವಿದ್ಯಾರ್ಥಿಗಳ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಬುಧವಾರ ಗೋವಿಂದ ಬಾಬು ಪೂಜಾರಿ ಉದ್ಘಾಟಿಸಿದರು. ಪ್ರೊ. ಪಿ.ಎಲ್. ಧರ್ಮ, ಸ್ವಾಮಿ ಜಿತಕಾಮಾನಂದಜಿ, ಕ್ಯಾ. ಗಣೇಶ್ ಕಾರ್ಣಿಕ್, ಡಾ. ಎ. ಶ್ರೀನಿವಾಸ್ ರಾವ್ ಇದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ರಾಮಕೃಷ್ಣ ಮಠದಲ್ಲಿ ಸ್ನಾತಕೋತ್ತರ ವಿದ್ಯಾರ್ಥಿಗಳ ವಿಚಾರ ಸಂಕಿರಣ
  • ಸುಮಾರು 600ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ಭಾಗಿ
ಮಂಗಳೂರು: ಎಷ್ಟೇ ಉನ್ನತ ಶಿಕ್ಷಣವನ್ನು ಪಡೆದರೂ, ನಮ್ಮ ಊರು, ನಮ್ಮ ಸಂಸ್ಕೃತಿ, ಆಚಾರ-ವಿಚಾರಗಳನ್ನು ಎಂದಿಗೂ ಮರೆಯಬಾರದು. ಜೀವನದಲ್ಲಿ ಒಂದು ಕನಸನ್ನು ಇಟ್ಟುಕೊಳ್ಳಿ; ಆ ಕನಸನ್ನು ನನಸಾಗಿಸಲು ನಿರಂತರವಾಗಿ ಪರಿಶ್ರಮಿಸಿ. ನಿಮ್ಮ ಕನಸನ್ನು ನನಸಾಗಿಸುವುದರ ಜೊತೆಗೆ, ಇನ್ನೊಬ್ಬರ ಕನಸನ್ನು ನನಸಾಗಿಸಲು ಸಹ ಶ್ರಮಿಸಿ ಎಂದು ಶೆಫ್ ಟಾಕ್ ಫುಡ್ & ಹಾಸ್ಪಿಟಾಲಿಟಿ ಸಂಸ್ಥೆಯ ಸಂಸ್ಥಾಪಕರು ಹಾಗೂ ಅಧ್ಯಕ್ಷ ಗೋವಿಂದ ಬಾಬು ಪೂಜಾರಿ ಕರೆ ನೀಡಿದರು.
ಮಂಗಳೂರಿನ ರಾಮಕೃಷ್ಣ ಮಠದಲ್ಲಿ ಆಯೋಜಿಸಲಾಗಿದ್ದ "ಶ್ರದ್ಧಾ" - ಸ್ನಾತಕೋತ್ತರ ವಿದ್ಯಾರ್ಥಿಗಳ ವಿಚಾರ ಸಂಕಿರಣ ಕಾರ್ಯಕ್ರಮವನ್ನು ಬುಧವಾರ ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿ ಮಂಗಳೂರು ವಿಶ್ವವಿದ್ಯಾನಿಲಯದ ಉಪಕುಲಪತಿ ಪ್ರೊ. ಪಿ.ಎಲ್. ಧರ್ಮ ಅವರು ಮಾತನಾಡಿ, ಸಮಾಜ ಸೇವೆಯನ್ನು ಮಾನವ ಸೇವೆಯೆಂದು ಪರಿಗಣಿಸಬೇಕು. ಸ್ವಾಮಿ ವಿವೇಕಾನಂದರ ದೃಷ್ಟಿಯಲ್ಲಿ ಭಾರತವು ಕೇವಲ ಒಂದು ದೇಶವಲ್ಲ; ಭಾರತದ ಪ್ರಗತಿ ಎಂದರೆ ಇಡೀ ಮಾನವ ಸಮಾಜದ ಪ್ರಗತಿ ಎಂದರ್ಥ. ನಿಜವಾದ ಬೆಳವಣಿಗೆ ಎಂದರೆ, ಒಬ್ಬರ ಏಳಿಗೆಯೊಂದಿಗೆ ಎಲ್ಲರನ್ನೂ ಜೊತೆಯಾಗಿ ಕೊಂಡೊಯ್ಯುವುದಾಗಿದೆ ಎಂದರು.
ಶ್ರೀನಿವಾಸ್ ವಿಶ್ವವಿದ್ಯಾನಿಲಯದ ಕುಲಪತಿ ಡಾ. ಎ. ಶ್ರೀನಿವಾಸ್ ರಾವ್ ಹಾಗೂ ಮಂಗಳೂರು ರಾಮಕೃಷ್ಣ ಮಿಷನ್ ಕಾರ್ಯದರ್ಶಿ ಸ್ವಾಮಿ ಜಿತಕಾಮಾನಂದಜಿ ಉಪಸ್ಥಿತರಿದ್ದರು.
ಮೈಸೂರು ರಾಮಕೃಷ್ಣ ಆಶ್ರಮದ ಸ್ವಾಮಿ ಯುಕ್ತೇಶಾನಂದಜಿ ಸಂವಾದ ನಡೆಸಿಕೊಟ್ಟರು. ಮಂಗಳೂರಿನ ಸ್ವಸ್ತಿಕ್ ನ್ಯಾಷನಲ್ ಬ್ಯುಸಿನೆಸ್ ಸ್ಕೂಲ್ ಅಧ್ಯಕ್ಷ ಡಾ. ರಾಘವೇಂದ್ರ ಹೊಳ್ಳ ಎನ್. ಸಂಪನ್ಮೂಲ ವ್ಯಕ್ತಿಯಾಗಿದ್ದರು. ಮಂಗಳೂರಿನ ಮನಶಾಂತಿ ಸಂಸ್ಥೆಯ ಮಾನಸಿಕ ಆರೋಗ್ಯ ವೃತ್ತಿಪರರು ಹಾಗೂ ನಿರ್ದೇಶಕಿ ಡಾ. ರಮೀಲಾ ಶೇಖರ್, ಐಲಾಜಿಕ್ಸ್ ಸಂಸ್ಥಾಪಕರು ಹಾಗೂ ತಾಂತ್ರಿಕ ನಿರ್ದೇಶಕ ಪ್ರವೀಣ್ ಉಡುಪ, ಮತ್ತು ಇನ್ವೆಂಜರ್ ಟೆಕ್ನಾಲಜೀಸ್‌ನ ಮಾನವ ಸಂಪನ್ಮೂಲ ವಿಭಾಗದ ಮುಖ್ಯಸ್ಥೆ ಕೃತಿಕಾ ಸರಳಾಯ ಭಾಗವಹಿಸಿದ್ದರು. ಮಂಗಳೂರಿನ ಎಸ್‌ಡಿಎಂ ಸ್ನಾತಕೋತ್ತರ ಅಧ್ಯಯನ ಕೇಂದ್ರದ ನಿರ್ದೇಶಕಿ ಡಾ. ಸೀಮಾ ಎಸ್. ಶೆಣೈ ಸಂವಾದವನ್ನು ನಿರ್ವಹಿಸಿದರು.
ಕ್ಯಾ. ಗಣೇಶ್ ಕಾರ್ಣಿಕ್ ಸ್ವಾಗತಿಸಿದರು. ಸ್ಮಿತಾ ಶೆಣೈ ಕಾರ್ಯಕ್ರಮ ನಿರೂಪಿಸಿದರು. ಮಂಗಳೂರು ವಿವಿ ಸ್ವಾಮಿ ವಿವೇಕಾನಂದ ಅಧ್ಯಯನ ಕೇಂದ್ರದ ಸಂಯೋಜಕ ಡಾ. ಚಂದ್ರ ಹೆಗಡೆ ವಂದಿಸಿದರು. ವಿವಿಧ ಕಾಲೇಜುಗಳ ಸುಮಾರು 600ಕ್ಕೂ ಹೆಚ್ಚು ಸ್ನಾತಕೋತ್ತರ ವಿದ್ಯಾರ್ಥಿಗಳು ಈ ವಿಚಾರ ಸಂಕಿರಣದಲ್ಲಿ ಭಾಗವಹಿಸಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net