ಕೆಎಸ್ಸಾರ್ಟಿಸಿ ಸಿಬ್ಬಂದಿ ಮೇಲೆ ಇರಲಿ ನಿಗಾ

ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಸಭೆ
 ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆ ಕಡಬ ತಾಲೂಕು ಅಧ್ಯಕ್ಷ ಕೃಷ್ಣಪ್ಪ ಜಿ.ಅಧ್ಯಕ್ಷತೆಯಲ್ಲಿ ನಡೆಯಿತು. ನವೀನ್ ಭಂಡಾರಿ, ನಾರಾಯಣ ಗೌಡ, ಅಂಗು ಮತ್ತಿತರರು ಇದ್ದರು.
ಗ್ಯಾರಂಟಿ ಯೋಜನೆ ಅನುಷ್ಠಾನ ಸಮಿತಿ ಸಭೆ ಕಡಬ ತಾಲೂಕು ಅಧ್ಯಕ್ಷ ಕೃಷ್ಣಪ್ಪ ಜಿ.ಅಧ್ಯಕ್ಷತೆಯಲ್ಲಿ ನಡೆಯಿತು. ನವೀನ್ ಭಂಡಾರಿ, ನಾರಾಯಣ ಗೌಡ, ಅಂಗು ಮತ್ತಿತರರು ಇದ್ದರು.
Published on: 

ವಿಜಯವಾಣಿ ಸುದ್ದಿಜಾಲ ಕಡಬ

ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ಚಾಲಕರು ಮತ್ತು ನಿರ್ವಾಹಕರು ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮೇಲಧಿಕಾರಿಗಳು ನಿಗಾ ವಹಿಸಬೇಕು ಎಂದು ಪಂಚ ಗ್ಯಾರಂಟಿ ಅನುಷ್ಠಾನ ಸಮಿತಿ ಕಡಬ ತಾಲೂಕು ನೂತನ ಅಧ್ಯಕ್ಷ ಕೃಷ್ಣಪ್ಪ ಜಿ.ರಾಮಕುಂಜ ಅಧಿಕಾರಿಗಳಿಗೆ ಸೂಚಿಸಿದರು.

ಕಡಬ ತಾಲೂಕು ಪಂಚಾಯಿತಿಯ ಗ್ಯಾರಂಟಿ ಅನುಷ್ಠಾನ ಸಮಿತಿ ಕಚೇರಿಯಲ್ಲಿ ನಡೆದ ನೂತನ ಸಮಿತಿಯ ಪ್ರಥಮ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಕಡಬದ ಕೆಲವು ಭಾಗಗಳಲ್ಲಿ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಗದಿತ ಪ್ರದೇಶಕ್ಕೆ ಕೊಂಡೊಯ್ಯದೆ ಅರ್ಧದಿಂದಲೇ ವಾಪಸ್ ಬರುತ್ತಿದ್ದಾರೆ. ಇನ್ನು ಕೆಲವೆಡೆ ವಿದ್ಯಾರ್ಥಿಗಳಿಗೆ ಬಸ್‌ಗಳನ್ನು ನಿಲ್ಲಿಸುತ್ತಿಲ್ಲ ಎಂದು ಸಮಿತಿ ಸದಸ್ಯ ವಿಜಯಕುಮಾರ್ ರೈ ದೂರಿದರು.

ಇದು ಚಾಲಕ ಮತ್ತು ನಿರ್ವಾಹಕರಿಂದ ನಡೆಯುತ್ತಿರುವ ಅವ್ಯವಸ್ಥೆಯಾಗಿದೆ. ಇಂತಹ ಸಿಬ್ಬಂದಿ ಸಮರ್ಪಕವಾಗಿ ಕಾರ್ಯನಿರ್ವಹಿಸುವಂತೆ ಮೇಲಧಿಕಾರಿಗಳು ಗಮನ ಹರಿಸಬೇಕು. ಅಧಿಕಾರಿಗಳಿಗೂ ಇಚ್ಛಾಶಕ್ತಿ ಇರಬೇಕು ಎಂದು ಕೃಷ್ಣಪ್ಪ ರಾಮಕುಂಜ ಹೇಳಿದರು.

ಕಡಬ ಭಾಗದ ಮರ್ಧಾಳ-ಕರ್ವಾಯಿ ಹಾಗೂ ಮಣಿಭಾಂಡದಲ್ಲಿ ಇಂತಹ ಸಮಸ್ಯೆ ಹೆಚ್ಚಾಗಿದೆ. ನೆಲ್ಯಾಡಿ ಬಸ್ ನಿಲ್ದಾಣ ವ್ಯವಸ್ಥಿತಗೊಳಿಸುವುದು, ಕಡಬಕ್ಕೆ ಬಸ್ ನಿಲ್ದಾಣ ಸೇರಿದಂತೆ ವಿವಿಧ ವಿಚಾರಗಳ ಕುರಿತು ಇಲಾಖೆ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು ಎಂದರು.

ವಿವಿಧ ಇಲಾಖೆಗಳ ಅಧಿಕಾರಿಗಳು ಇಲಾಖಾವಾರು ಮಾಹಿತಿ ನೀಡಿದರು. ಸಮಿತಿ ಸದಸ್ಯರಾದ ಜಯರಾಮ ಗೌಡ, ಸವಿತಾ ಕೌಕ್ರಾಡಿ, ಪೂವಪ್ಪ ಕರ್ಕೇರ ಗೋಳಿತೊಟ್ಟು, ಸತೀಶ್ ಶೆಟ್ಟಿ, ರಂಜನ್, ಸಿದ್ದೀಕ್ ನೀರಾಜೆ, ಸೃಜನ್, ಮಹಮ್ಮದ್ ಕಲಂದರ್, ತಾಪಂ ವ್ಯವಸ್ಥಾಪಕ ನಾರಾಯಣ ಗೌಡ, ವಿಷಯ ನಿರ್ವಾಹಕ ಅಂಗು ಉಪಸ್ಥಿತರಿದ್ದರು. ಸಮಿತಿ ಕಾರ್ಯದರ್ಶಿ ಹಾಗೂ ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ ಸ್ವಾಗತಿಸಿದರು.

ಯೋಜನೆಗಳ ಅರಿವು ಮೂಡಿಸಿ

ಗ್ಯಾರಂಟಿ ಸೌಲಭ್ಯಗಳು ಕಾಂಗ್ರೆಸ್ ಕೊಡುಗೆ ಎಂಬುದು ಗ್ರಾಮೀಣ ಜನರಿಗೆ ಇನ್ನೂ ಸರಿಯಾಗಿ ತಿಳಿದಿಲ್ಲ. ಪಂಚ ಯೋಜನೆಗಳ ಪ್ರಯೋಜನವನ್ನು ಜನರು ಪಡೆಯುತ್ತಿದ್ದಾರೆ. ಆದರೆ ಈ ಸೌಲಭ್ಯಗಳನ್ನು ಯಾರು ನೀಡುತ್ತಿದ್ದಾರೆ ಎಂಬುದರ ಬಗ್ಗೆ ಹೆಚ್ಚಿನ ಪ್ರಚಾರ ಮಾಡಬೇಕು ಎಂದು ಸಮಿತಿ ಸದಸ್ಯ ಗಣೇಶ್ ಕೈಕುರೆ ಹೇಳಿದರು.

ನೂತನ ಸಮಿತಿ ಪದಗ್ರಹಣ

ಪದಗ್ರಹಣ ಸಮಾರಂಭದಲ್ಲಿ ನೂತನ ಅಧ್ಯಕ್ಷರು, ಸದಸ್ಯರಿಗೆ ಅಧಿಕಾರ ಹಸ್ತಾಂತರ ನಡೆಯಿತು. ಗ್ಯಾರಂಟಿ ಯೋಜನೆ ಜಿಲ್ಲಾಧ್ಯಕ್ಷ ಭರತ್ ಮುಂಡೋಡಿ, ಮುಖಂಡರಾದ ಧನಂಜಯ ಅಡ್ಪಂಗಾಯ, ಉಷಾ ಅಂಚನ್, ಪಿ.ಪಿ.ವರ್ಗೀಸ್, ಬಾಲಕೃಷ್ಣ ಬಳ್ಳೇರಿ, ಪ್ರವೀಣ್ ಕುವಾರ್ ಕೆಡೆಂಜಿ, ನೀಲಾವತಿ ಶಿವರಾಂ, ಅಶ್ರಫ್ ಶೇಡಿಗುಂಡಿ, ಗೋಪಿನಾಥ್, ಸೈಮನ್ ಸಿ.ಜೆ., ಕೃಷ್ಣಪ್ಪ ಪೂಜಾರಿ ಬೈಲಂಗಡಿ, ರೋಹಿತ್ ಮೊದಲಾದವರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net