9 ಗ್ರಾಮಗಳು ಕ್ಷಯಮುಕ್ತ ಯೋಜನೆಗೆ ಆಯ್ಕೆ KDP

ಪುತ್ತೂರು ತಾಲೂಕು ಪಂಚಾಯಿತಿಯಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿದರು. ಉಮಾನಾಥ ಶೆಟ್ಟಿ, ಎಸ್.ಬಿ.ಕೂಡಲಗಿ, ನವೀನ್ ಭಂಡಾರಿ, ವಿದ್ಯಾ ಕಾಳೆ ಉಪಸ್ಥಿತರಿದ್ದರು.
ಪುತ್ತೂರು ತಾಲೂಕು ಪಂಚಾಯಿತಿಯಲ್ಲಿ ನಡೆದ ಕೆಡಿಪಿ ತ್ರೈಮಾಸಿಕ ಸಭೆಯಲ್ಲಿ ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿದರು. ಉಮಾನಾಥ ಶೆಟ್ಟಿ, ಎಸ್.ಬಿ.ಕೂಡಲಗಿ, ನವೀನ್ ಭಂಡಾರಿ, ವಿದ್ಯಾ ಕಾಳೆ ಉಪಸ್ಥಿತರಿದ್ದರು.
Published on

ಪ್ರಮುಖ ಮುಖ್ಯಾಂಶಗಳು

  • ಕೆಡಿಪಿ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿ ಮಾಹಿತಿ
ಪುತ್ತೂರು: ತಾಲೂಕು ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಯನ್ನು ಇಲಾಖೆಯ ನಿಯಮಗಳನ್ನು ಪಾಲಿಸಿಕೊಂಡು ತ್ವರಿತವಾಗಿ ಮಾಡಿಕೊಡಲಾಗುತ್ತಿದೆ. ಸಾಮೆತ್ತಡ್ಕ ಆರೋಗ್ಯ ಕೇಂದ್ರದ ಕಟ್ಟಡ ಕಾಮಗಾರಿ ಭರದಿಂದ ನಡೆಯುತ್ತಿದೆ. ಈಶ್ವರಮಂಗಲ ವೈದ್ಯರು ರಜೆ ಹಾಕಿ ಹೋಗಿದ್ದು, ಆರು ನೋಟಿಸ್ ನೀಡಲಾಗಿದೆ. ನೇಮಕಾತಿಗೂ ಬೇರೆ ವೈದ್ಯರು ಬರುತ್ತಿಲ್ಲ. ತಾಲೂಕು ವ್ಯಾಪ್ತಿಯಲ್ಲಿ ಮೂರು ವರ್ಷದಿಂದ ಮಲೇರಿಯಾ ಕಡಿಮೆಯಾಗಿದೆ. ಡೆಂಘೆ ಕೇವಲ ೩ ಪ್ರಕರಣ ಪತ್ತೆಯಾಗಿದೆ. ಕ್ಷಯಮುಕ್ತ ಗ್ರಾಮ ಯೋಜನೆಗೆ ೯ ಗ್ರಾಮಗಳನ್ನು ಆಯ್ಕೆ ಮಾಡಲಾಗಿದೆ ಎಂದು ಆರೋಗ್ಯ ಇಲಾಖೆ ಅಧಿಕಾರಿ ಮಾಹಿತಿ ನೀಡಿದರು.
ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶನಿವಾರ ನಡೆದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮಗಳ ತ್ರೈಮಾಸಿಕ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದರು.
ವಿಟ್ಲ ಹೋಬಳಿಯಲ್ಲಿ ವಸತಿ ನಿವೇಶನ ಕಾಯ್ದಿರಿಸುವ ನಿಟ್ಟಿನಲ್ಲಿ ಈಗಾಗಲೇ ಗ್ರಾಮಕರಣಿಕರಿಗೆ ಸೂಚಿಸಲಾಗಿದೆ. ಬಿರುಮಲೆ ವಸತಿನಿಲಯಕ್ಕೆ ನಗರಸಭೆಯಿಂದ ನೀರಿನ ವ್ಯವಸ್ಥೆ ಮಾಡಲಾಗಿದೆ. ಪಟ್ಟಣ ಪಂಚಾಯಿತಿಗೆ ಸದ್ಯ ವಸತಿ ನಿವೇಶನಕ್ಕೆ ೪೬೫ ಅರ್ಜಿಗಳು ಬಂದಿದ್ದು, ೮.೭೨ ಎಕರೆ ಜಾಗ ಮೀಸಲಿಡಲು ತಹಸೀಲ್ದಾರ್‌ಗೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಕಾಡಾನೆ ಹಾವಳಿ ತಡೆಗೆ ೪ ಕಿ.ಮೀ. ಆನ ಕಂದಕ ರಚನೆಗೆ ಕ್ರಮ ಕೈಗೊಳ್ಳಳಾಗಿದೆ. ಪುತ್ತೂರು-ಉಪ್ಪಿನಂಗಡಿ ರಸ್ತೆ ಬದಿ ೯೦೦ ಹಣ್ಣಿನ ಗಿಡಗಳನ್ನು ನೆಡಲಾಗಿದೆ ಎಂದು ಸಂಬಂಧಪಟ್ಟ ಇಲಾಖೆ ಅಧಿಕಾರಿಗಳು ಸಭೆಗೆ ತಿಳಿಸಿದರು.
ತ್ವರಿತ ನೇಮಕಾತಿ ಮಾಡಿ: ಶಾಸಕ ಅಶೋಕ್ ಕುಮಾರ್ ರೈ ಮಾತನಾಡಿ, ಸರ್ಕಾರಿ ಆಸ್ಪತ್ರೆಯಲ್ಲಿರುವ ಖಾಲಿ ಹುದ್ದೆಯನ್ನು ಜಿಲ್ಲಾ ಆರೋಗ್ಯಽಕಾರಿಗಳಿಂದ ಮಾರ್ಗದರ್ಶನ ಪಡೆದು ತ್ವರಿತವಾಗಿ ನೇಮಕ ಮಾಡಬೇಕು. ಪಟ್ಟಣ ಪಂಚಾಯಿತಿ ಭಾಗದಲ್ಲಿ ಜಾಗದ ಸಮಸ್ಯೆಯಿದ್ದರೆ ಹೆಚ್ಚುವರಿ ಇರುವ ಅರ್ಜಿಯನ್ನು ಪಕ್ಕದ ಗ್ರಾಮಕ್ಕೆ ವರ್ಗಾಯಿಸುವುದು ಉತ್ತಮ. ರಸ್ತೆ ಬದಿ ನೆಟ್ಟ ಗಿಡಗಳಿಗೆ ವಾರಕ್ಕೊಂದು ಬಾರಿಯಾದರೂ ನೀರುಣಿಸಿ ಪೋಷಿಸಬೇಕು. ಅರಣ್ಯ ಇಲಾಖೆ ಜಾಗದಲ್ಲಿರುವ ಮಾವಿನ ಮಿಡಿಗಳನ್ನು ಕೊಯ್ದಲ್ಲಿ ತಕ್ಷಣ ದೂರು ಕೊಡಬೇಕು. ಡಯಾಲಿಸಿಸ್‌ನ ಕೇಂದ್ರಕ್ಕೆ ೨೫ ಲಕ್ಷ ರೂ. ಅನುದಾನ ಎಂಆರ್‌ಪಿಎಲ್‌ನಿಂದ ಬಿಡುಗಡೆ ಮಾಡಲಾಗಿದೆ. ತಾಲೂಕು ಆಸ್ಪತ್ರೆಗೆ ಹೆರಿಗೆ ತಜ್ಞರನ್ನು ತಕ್ಷಣ ನೇಮಕವಾಗಬೇಕು. ಪುತ್ತೂರು ಡಯಾಲಿಸಿಸ್ ಕೇಂದ್ರಕ್ಕೆ ಬೇಕಾದ ಅಗತ್ಯ ಸೌಲಭ್ಯಗಳನ್ನು ತ್ವರಿತವಾಗಿ ಕಲ್ಪಿಸಬೇಕು ಎಂದು ಸೂಚಿಸಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಅಧ್ಯಕ್ಷ ಉಮಾನಾಥ ಶೆಟ್ಟಿ, ಪೌರಾಯುಕ್ತೆ ವಿದ್ಯಾ ಎಂ.ಕಾಳೆ, ತಹಸೀಲ್ದಾರ್ ಎಸ್.ಬಿ.ಕೂಡಲಗಿ, ತಾಪಂ ಕಾರ್ಯನಿರ್ವಹಣಾಧಿಕಾರಿ ನವೀನ್ ಭಂಡಾರಿ, ವಿವಿಧ ಇಲಾಖೆ ಅಧಿಕಾರಿಗಳು ಉಪಸ್ಥಿತರಿದ್ದರು.

‘ವಿಜಯವಾಣಿ’ ವರದಿಗಳು ಉಲ್ಲೇಖ

ಪುತ್ತೂರು ನಗರದ ಸಮಸ್ಯೆಗಳ ಬಗ್ಗೆ ವಿಜಯವಾಣಿ ಪ್ರಕಟಿಸಿದ್ದ ವರದಿಗಳ ಬಗ್ಗೆ ಸಭೆಯಲ್ಲಿ ಉಲ್ಲೇಖಿಸಲಾಯಿತು. -ಟ್‌ಪಾತ್‌ನಲ್ಲಿ ವಾಹನಗಳ ನಿಲುಗಡೆಯಿಂದ ಆಗುತ್ತಿರುವ ಸಮಸ್ಯೆ ನಿವಾರಿಸಬೇಕು, ಆದರ್ಶ ಆಸ್ಪತ್ರೆಯ ಬಳಿ ಹಾಗೂ ರೈಲು ನಿಲ್ದಾಣದ ಬಳಿ ತೋಡಿಗೆ ಕಸ ಬಿಸಾಡದಂತೆ ಕ್ರಮ ಕೈಗೊಳ್ಳಬೇಕು. ರಸ್ತೆಯಲ್ಲಿ ಮಣ್ಣು ಬಿದ್ದು ಆಗುತ್ತಿರುವ ಸಮಸ್ಯೆಗೆ ಸೂಕ್ತ ಕಾನೂನು ಕ್ರಮ ಆಗಬೇಕು ಎಂದು ನಗರಸಭೆ ಅಽಕಾರಿಗಳಿಗೆ ಶಾಸಕ ಅಶೋಕ್ ಕುಮಾರ್ ರೈ ಸೂಚಿಸಿದರು. ವಾಹನ ನಿಲುಗಡೆ ಬಗ್ಗೆ ಪೊಲೀಸ್ ಇಲಾಖೆ ಕ್ರಮ ಕೈಗೊಳ್ಳಬೆಕು. ಗ್ರಾಹಕರು ವಾಹನ ನಿಲ್ಲಿಸಿದರೆ, ನಗರಸಭೆ ಜವಾಬ್ದಾರಿಯಾಗುವುದಿಲ್ಲ. ಕಸ ಎಸೆಯದಂತೆ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಪೌರಾಯುಕ್ತೆ ವಿದ್ಯಾ ಎಂ.ಕಾಳೆ ಹೇಳಿದರು.
"

ಅಧಿಕಾರಿಗಳು ಸರಿಯಾಗಿ ಪರಿಶೀಲಿಸುವ ಹಾಗೂ ಗುತ್ತಿದೆಗಾರರ ಮೇಲೆ ಒತ್ತಡ ಹೇರದ ಕಾರಣ ರಸ್ತೆ ಸಮಸ್ಯೆ ಬಿಗಡಾಯಿಸಿದೆ. ಕುಳದಲ್ಲಿ ದೊಡ್ಡ ಮರವನ್ನು ಕಡಿಯದೆ ನಿವೇಶನ ಮಾಡಲು ಅವಕಾಶ ಮಾಡಿಕೊಡಬೇಕು. ಸಾಮಾಜಿಕ ಅರಣ್ಯವನ್ನು ಯಾವುದೇ ಕಾರಣಕ್ಕೂ ಅರಣ್ಯ ಎಂದು ವರದಿ ನೀಡಬಾರದು. ಕೆಆರ್‌ಡಿಎಲ್, ಅಗ್ನಿಶಾಮಕ, ಬಂಟ್ವಾಳ ಮೆಸ್ಕಾಂ ಅಧಿಕಾರಿಗಳಿಗೆ ಸಭೆಗೆ ಗೈರಾದ ಬಗ್ಗೆ ಮೆಮೋ ನೀಡಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net