ಮ್ಯಾಂಗ್ರೋವ್ ಕಾಡುಗಳು, ಹಿನ್ನೀರು ಮತ್ತು ಬಿಳಿ ಮರಳಿನ ಕಡಲತೀರಗಳಿಂದ ಕೂಡಿರುವ ಪ್ರಾಕೃತಿಕ ಸೌಂದರ್ಯದ ಕರಾವಳಿ ಗ್ರಾಮ ಅರಿಕ್ಕಾಡಿಯನ್ನು ಸಾಹಸ ಪ್ರವಾಸೋದ್ಯಮ ಕೇಂದ್ರವನ್ನಾಗಿಸಲು ಜಿಲ್ಲಾ ಪ್ರವಾಸೋದ್ಯಮ ಇಲಾಖೆ ಸಿದ್ಧತೆ ನಡೆಸುತ್ತಿದೆ. ಅರಿಕ್ಕಾಡಿಯಲ್ಲಿ ಪಾತ್‌ವೇ ಆಧರಿಸಿ ಕಯಾಕಿಂಗ್ ಹಬ್ ಪ್ರಾರಂಭಿಸುವ ಯೋಜನೆಗೆ ಅಂತಿಮ ಸಿದ್ಧತೆಗಳು ಪೂರ್ಣಗೊಂಡಿವೆ.