

ಶಾಲೆಯಲ್ಲಿ ಪ್ರತೀ ವರ್ಷ ಮಕ್ಕಳ ದಾಖಲಾತಿ ಹೆಚ್ಚಾಗುತ್ತಿದೆ. ಮಕ್ಕಳು ಆಂಗ್ಲ ಮಾಧ್ಯಮ ಶಿಕ್ಷಣದಿಂದ ವಂಚಿತರಾಗಬಾರದು ಎಂಬ ಏಕೈಕ ಉದ್ದೇಶದಿಂದ ಶಾಲೆಯಲ್ಲಿ ಸರ್ಕಾರದ ಅನುಮತಿಗಾಗಿ ಕಾಯದೆ ಆಂಗ್ಲ ಮಾಧ್ಯಮ ತರಗತಿ ಆರಂಭಿಸಿರುವುದು. ಮಕ್ಕಳನ್ನು ಕರೆ ತರಲು ಬಸ್ ವ್ಯವಸ್ಥೆ ಮಾಡಿರುವುದು ತಾಲೂಕಿನಲ್ಲೇ ಪ್ರಥಮ ಪ್ರಯೋಗವಾಗಿದೆ. ಶಾಲೆಯನ್ನು ಕೆಪಿಎಸ್ ಮಾಡಬೇಕೆಂಬುವುದು ನಮ್ಮ ಬೇಡಿಕೆ.