ವಿವಿಧ ಸೇವೆಗಳಿಂದ 12 ಕೋಟಿ ರೂ., ಕೋಣೆ ಬಾಡಿಗೆಯಿಂದ 70 ಲಕ್ಷ ರೂ., ಕಟ್ಟಡ ಬಾಡಿಗೆಯಿಂದ 44 ಲಕ್ಷ ರೂ., ಅನ್ನದಾನ, ವಿದ್ಯಾದಾನ ಕಾಣಿಕೆ ಮತ್ತು ಹುಂಡಿಯಿಂದ 6 ಕೋಟಿ ರೂ., ಕಾಣಿಕೆ ಹುಂಡಿಯಿಂದ 6.30 ಕೋಟಿ ರೂ., ಇ-ಹುಂಡಿಯಿಂದ 24 ಲಕ್ಷ ರೂ., ಯಕ್ಷಗಾನ ಮೇಳದ ಕಾಣಿಕೆ, ತತ್ಕಾಲ್, ನೋಂದಣಿ, ಹುಂಡಿಗಳಿಂದ 1.83 ಕೋಟಿ ರೂ., ಶೀಘ್ರ ದರ್ಶನದಿಂದ 14 ಲಕ್ಷ ರೂ., ಶೇಷವಸ್ತ್ರ ಮಾರಾಟದಿಂದ 1.62 ಕೋಟಿ ರೂ., ಚಿನ್ನದ ರಥೋತ್ಸವ ಕಾಣಿಕೆಯಿಂದ 6.40 ಲಕ್ಷ ರೂ., ಹಣ್ಣುಕಾಯಿ ಕೌಂಟರ್, ಸೀರೆ ಫೋಟೋ ಕೌಂಟರ್ ಹಾಗೂ ನಂದಿನಿ ಮಿಲ್ಕ್ ಪಾರ್ಲರ್ ಸಾಮಗ್ರಿ ಮಾರಾಟದಿಂದ 82 ಲಕ್ಷ ರೂ., ನಿರಖು ಠೇವಣಿ ಬಡ್ಡಿಯಿಂದ 3.70 ಕೋಟಿ ರೂ. ಆದಾಯ ಬಂದಿದೆ.