ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನ ಕೆರೆ ದೀಪೋತ್ಸವ : ದೇವರ ಪೇಟೆ ಉತ್ಸವ ಸಾಧಕರಿಗೆ ಗೌರವಾರ್ಪಣೆ

ಮೂಡುವೇಣುಪುರ ಶ್ರೀ ವೆಂಕಟರಮಣ ಶ್ರೀ ಹನೂಮಂತ ದೇವಸ್ಥಾನದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
ಮೂಡುವೇಣುಪುರ ಶ್ರೀ ವೆಂಕಟರಮಣ ಶ್ರೀ ಹನೂಮಂತ ದೇವಸ್ಥಾನದಲ್ಲಿ ಸಾಧಕರನ್ನು ಸನ್ಮಾನಿಸಲಾಯಿತು.
Published on

ಮೂಡುಬಿದಿರೆ: ಮೂಡುವೇಣುಪುರ ಶ್ರೀ ವೆಂಕಟರಮಣ ಶ್ರೀ ಹನೂಮಂತ ದೇವಸ್ಥಾನದ ಕಾರ್ತಿಕ ಹುಣ್ಣಿಮೆ ಲಕ್ಷ ದೀಪೋತ್ಸವ, ಕೆರೆ ದೀಪೋತ್ಸವ, ಶ್ರೀ ದೇವಿ ಭೂದೇವಿ ಸಹಿತ ವೆಂಕಟರಮಣ ದೇವರಿಗೆ ಪ್ರಾರ್ಥನೆ, ಪಂಚಾಮೃತಾಭಿಷೇಕ, ಮಧ್ಯಾಹ್ನ ವಿಶೇಷ ಅಲಂಕಾರ ಪೂಜೆ ನೆರವೇರಿತು.

ಮಧ್ಯಾಹ್ನ ಸಮಾರಾಧನೆಯ ಬಳಿಕ ಸಂಜೆ ಶ್ರೀದೇವಿ ಭೂದೇವಿ ಸಹಿತ ವೆಂಕಟರಮಣ ದೇವರು ಮತ್ತು ಶ್ರೀ ಗೋಪಾಲಕೃಷ್ಣ ದೇವರ ಪೇಟೆ ಉತ್ಸವ ನಡೆಯಿತು. ನಂತರ ಶ್ರೀ ವೆಂಕಟರಮಣ ದೇವರು ಶ್ರೀ ದೇವಳದ ಕೆರೆಯ ದೇವರ ಕಟ್ಟೆಯಲ್ಲಿ ಆರೂಢರಾಗಿ, ಮಹಾಪೂಜೆ ನೆರವೇರಿಸಲಾಯಿತು.

ಸಭಾ ಕಾರ್ಯಕ್ರಮದಲ್ಲಿ, ಯಕ್ಷಗಾನ ಕಲಾವಿದ, ಸಂಘಟಕ ಎಂ.ಶಾಂತಾರಾಮ ಕುಡ್ವ ಹಾಗೂ ಕೆನರಾ ಇಂಜಿನಿಯರಿಂಗ್ ಕಾಲೇಜಿನ ಉಪನ್ಯಾಸಕ, ಸಾಹಿತಿ ಎಂ.ಗಣೇಶ್ ಕಾಮತ್ ಅವರನ್ನು ನವಶಕ್ತಿ ಮಿತ್ರ ವೃಂದದವರ ವತಿಯಿಂದ ಸನ್ಮಾನಿಸಲಾಯಿತು.

ಮೂಲ್ಕಿ-ಮೂಡುಬಿದಿರೆ ಶಾಸಕ ಉಮಾನಾಥ ಕೋಟ್ಯಾನ್ ಸಾಧಕರನ್ನು ಸನ್ಮಾನಿಸಿದರು. ಆಡಳಿತ ಮೊಕ್ತೇಸರ ಜಿ.ಉಮೇಶ್ ಪೈ ಅಧ್ಯಕ್ಷತೆ ವಹಿಸಿದ್ದರು. ಮೊಕ್ತೇಸರ, ಜಿಲ್ಲಾ ಹಿರಿಯ ಸಹಕಾರಿ ಧುರೀಣ ಎಂ.ದಯಾನಂದ ಪೈ, ಮೊಕ್ತೇಸರರಾದ ಶಿವಾನಂದ ಪ್ರಭು, ರಮಾನಾಥ ಭಟ್, ರಾಘವೇಂದ್ರ ಪ್ರಭು, ಜ್ಞಾನೇಶ್ವರ ಪೈ, ಮನೋಜ್ ಶೆಣೈ, ರಾಜೇಶ್ ಮಲ್ಯ, ರಘುವೀರ ಶೆಣೈ, ಮುರಳೀಧರ ಭಟ್, ಬೋಳ ವಿಶ್ವನಾಥ ಕಾಮತ್, ಸುಧೀರ್ ಪೈ, ರಾಮದಾಸ ಭಟ್ ಮತ್ತಿತರರು ಉಪಸ್ಥಿತರಿದ್ದರು.

ವಿವಿಧ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ವಿಜೇತರಾದವರಿಗೆ ಬಹುಮಾನ ವಿತರಿಸಲಾಯಿತು. ಅತಿಹೆಚ್ಚು ಅಂಕಗಳಿಸಿದ ಸಮಾಜದ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಗೌರವಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net