

ಬಿಡುಗಡೆಯಾಗಿರುವ 1 ಕೋಟಿ ರೂ. ಅನುದಾನದಲ್ಲಿ ಕಾಮಗಾರಿ ನಡೆಯುತ್ತಿದ್ದು, ಈಗಾಗಲೇ ಕಡಬ ಭಾಗದಿಂದ ಕಲ್ಲಂತಡ್ಕ ತನಕ ರಸ್ತೆ ಹೆಚ್ಚು ಹಾಳಾಗಿರುವ 3 ಕಡೆ ರಸ್ತೆ ಎತ್ತರಿಸಿ ಕಾಂಕ್ರೀಟ್ ಹಾಕಲಾಗಿದೆ. ಕಾಂಕ್ರೀಟ್ ಹಾಕಿದಲ್ಲಿಗೆ ಸರಿಯಾಗಿ ರಸ್ತೆ ಎತ್ತರಿಸಿ ಡಾಂಬರ್ ಹಾಕುವ ಕೆಲಸ ತಕ್ಷಣ ಪ್ರಾರಂಭಿಸಲು ಲೋಕೋಪಯೋಗಿ ಇಲಾಖಾಧಿಕಾರಿ ಹಾಗೂ ಗುತ್ತಿಗೆದಾರರಿಗೆ ಸೂಚಿಸಲಾಗಿದೆ. ಓಂತ್ರಡ್ಕದಿಂದ ಪಂಜದ ತನಕ ಈಗಾಗಲೇ ಲೋಕೋಪಯೋಗಿ ಇಲಾಖೆ ಮೂಲಕ ನಿರ್ವಹಣಾ ಅನುದಾನದಲ್ಲಿ ರಸ್ತೆ ಗುಂಡಿಗಳನ್ನು ಮುಚ್ಚಿ ತೇಪೆ ಕಾರ್ಯ ನಡೆಸಲಾಗಿದೆ.