ಪುತ್ತೂರು: ನೆಹರು ನಗರ- ವಿವೇಕಾನಂದ ಕಾಲೇಜು- ಪಡೀಲು ಸಂಪರ್ಕ ಕಲ್ಪಿಸುವಲ್ಲಿ ಇರುವ ರೈಲ್ವೆ ಮೇಲ್ಸೇತುವೆಯನ್ನು ಇಲಾಖೆಯು 5.34 ಕೋಟಿ ರೂಪಾಯಿ ವೆಚ್ಚದಲ್ಲಿ ಮರುನಿರ್ಮಾಣ ಮಾಡಿದ್ದು, ಎರಡು ವರ್ಷ ಕಳೆಯುತ್ತಿದ್ದಂತೆಯೇ ಸೇತುವೆಯ ಕಾಂಕ್ರೀಟ್ ಏಳಲಾರಂಭಿಸಿದೆ. ನಿತ್ಯ ಸಾವಿರಾರು ವಿದ್ಯಾರ್ಥಿಗಳು, ವಾಹನಗಳು ಸಂಚರಿಸುವ ಸೇತುವೆ ಇದಾಗಿದ್ದು, ಸಾರ್ವಜನಿಕರಲ್ಲಿ ಕಳಪೆ ಕಾಮಗಾರಿಯ ಆತಂಕ ಮೂಡಿಸಿದೆ.