ಪೊಲೀಸ್‌ ಜತೆ ವಾಗ್ವಾದ, ಪಿಎಆರ್‌ ದಾಖಲು KABAKA

ರಾತ್ರಿ ಗಸ್ತು ಕರ್ತವ್ಯ
ರಾತ್ರಿ ಗಸ್ತು ಕರ್ತವ್ಯ
Published on

ಪ್ರಮುಖ ಮುಖ್ಯಾಂಶಗಳು

  • ಹೋಟೆಲ್‌ ಮುಚ್ಚಲು ಹೇಳಿದ್ದಕ್ಕೆ ತಕರಾರು
ಪುತ್ತೂರು: ಕಬಕ ಜಂಕ್ಷನ್‌ನಲ್ಲಿ ಅವಧಿ ಮೀರಿ ಕಾರ್ಯಾಚರಿಸುತ್ತಿದ್ದ ಹೋಟೆಲ್‌ ಮುಚ್ಚಲು ಸೂಚಿಸಿದ್ದಕ್ಕೆ ಗ್ರಾಹಕರೊಬ್ಬರು ಪೊಲೀಸ್‌ ಸಿಬ್ಬಂದಿಯ ಜತೆಗೆ ವಾಗ್ವಾದ ನಡೆಸಿದ್ದು, ಮುಂಜಾಗ್ರತಾ ಕ್ರಮ ವರದಿ (ಪಿ.ಎ.ಆರ್‌.)ಯಂತೆ ಕಾನೂನು ಕ್ರಮ ಕೈಗೊಳ್ಳಲಾಗಿದೆ. ಪರವಾನಗಿ ಅವಧಿ ಮುಗಿದರೂ ಅನಧಿಕೃತವಾಗಿ ಕಾರ್ಯನಿರ್ವಹಿಸುತ್ತಿದ್ದ ಹೋಟೆಲನ್ನು ಬಂದ್‌ ಮಾಡಿಸಲಾಯಿತು. ಘಟನೆಯ ಬಗ್ಗೆ ಮೇಲಧಿಕಾರಿಗಳಿಗೆ ಮಾಹಿತಿ ನೀಡದೆ ಪರಿಸ್ಥಿತಿಯನ್ನು ವೃತಿಪರವಾಗಿ ನಿರ್ವಹಿಸುವಲ್ಲಿ ವಿಫಲರಾದ ಉಪನಿರೀಕ್ಷಕರಿಗೆ ಎಚ್ಚರಿಕೆ ನೀಡಿದ ಬಗ್ಗೆ ಪೊಲೀಸ್‌ ಪ್ರಕಟಣೆ ನೀಡಿದೆ.
ಜೂ.18ರಂದು ರಾತ್ರಿ 10.30ರ ವೇಳೆಗೆ ಪುತ್ತೂರು ನಗರ ಠಾಣೆಯ ಸಹಾಯಕ ಉಪನಿರೀಕ್ಷಕ ಚಂದ್ರ ಅವರು ಸಿಬ್ಬಂದಿ ಅಸ್ತಮ್‌ ಜತೆ ರಾತ್ರಿ ಗಸ್ತು ಕರ್ತವ್ಯ ನಿರ್ವಹಿಸುತ್ತ ಕಬಕ ಜಂಕ್ಷನ್‌ ಬಳಿ ತೆರಳಿದಾಗ ಮೊಹಮ್ಮದ್‌ ಆಸೀಫ್‌ ಅವರಿಗೆ ಸೇರಿದ ಹೋಟೆಲ್‌ ತೆರೆದಿತ್ತು. ಹೋಟೆಲ್‌ ಮುಚ್ಚುವಂತೆ ಸೂಚಿಸಿ ತೆರಳಿದ್ದರು. ಬಳಿಕ ತಡರಾತ್ರಿ ಸುಮಾರು 1.30ಕ್ಕೆ ಉಪನಿರೀಕ್ಷಕ ಸುರೇಶ್‌ ಎಂಬುವರ ಜತೆಗೆ ಚಂದ್ರ, ಅಸ್ತಮ್‌ ಮತ್ತೆ ಅದೇ ಸ್ಥಳಕ್ಕೆ ಗಸ್ತು ಬಂದಾಗ ಹೋಟೆಲ್‌ ತೆರೆದಿದ್ದು ಮೂವರು ಗ್ರಾಹಕರು ಕುಳಿತಿದ್ದರು.
ನಿಯಮಬಾಹಿರವಾಗಿ ತಡರಾತ್ರಿ ಹೋಟೆಲ್‌ ತೆರೆದಿರುವ ಬಗ್ಗೆ ಹೋಟೆಲ್‌ ಸಿಬ್ಬಂದಿಗೆ ಕಾನೂನು ತಿಳುವಳಿಕೆ ನೀಡಿ ತಕ್ಷಣ ಮುಚ್ಚುವಂತೆ ಸೂಚಿಸಿದ ಸಂದರ್ಭ ಮೂವರು ಗ್ರಾಹಕ ಪೈಕಿ ಮುಕ್ರಂಪಾಡಿ ನಿವಾಸಿ ಉಜ್ವಲ್‌ ಕುಮಾರ್‌ ಪ್ರಭು (45) ಎಂಬುವರು ಹೋಟೆಲ್‌ ಮುಚ್ಚವುದಕ್ಕೆ ತಕರಾರು ತೆಗೆದು ಕರ್ತವ್ಯದಲ್ಲಿದ್ದ ಪೊಲೀಸರೊಂದಿಗೆ ವಾಗ್ವಾದ ನಡೆಸಿದ್ದಾರೆ. ಪೊಲೀಸರು ಇದನ್ನು ವೀಡಿಯೊ ಚಿತ್ರೀಕರಣ ಮಾಡಿಕೊಂಡು ದೂರು ದಾಖಲಿಸಿದ್ದಾರೆ. ಉಜ್ವಲ್‌ ಕುಮಾರ್‌ ಮೇಲೆ ಈಗಗಾಲೇ ನಗರ ಠಾಣೆಯಲ್ಲಿ 2 ಪ್ರಕರಣ ದಾಖಲಾಗಿದೆ.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net