ಕೇಂದ್ರದ ಕುರಿತು ರಾಜ್ಯ ಸರ್ಕಾರಕ್ಕೆ ಭಯ : ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್.ಅಶ್ವಿನಿ ಹೇಳಿಕೆ

ಬಂಬ್ರಾಣದಲ್ಲಿ ಭಾನುವಾರ ವಿವಿಧ ವಾರ್ಡ್‌ಗಳ ಜಂಟಿ ಚುನಾವಣಾ ಸಮಾವೇಶ ಉದ್ಘಾಟಿಸಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಮಾತನಾಡಿದರು.
ಬಂಬ್ರಾಣದಲ್ಲಿ ಭಾನುವಾರ ವಿವಿಧ ವಾರ್ಡ್‌ಗಳ ಜಂಟಿ ಚುನಾವಣಾ ಸಮಾವೇಶ ಉದ್ಘಾಟಿಸಿ ಬಿಜೆಪಿ ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಮಾತನಾಡಿದರು.
Published on

ಕುಂಬಳೆ: ಕೇಂದ್ರ ಸರ್ಕಾರದ ವಿವಿಧ ಕಲ್ಯಾಣ ಯೋಜನೆಗಳನ್ನು ಜಾರಿಗೊಳಿಸಿದರೆ ಬಿಜೆಪಿ ರಾಜಕೀಯವಾಗಿ ಲಾಭ ಪಡೆಯುತ್ತದೆ ಎಂಬ ಭಯ ಕೇರಳ ಸರ್ಕಾರಕ್ಕೆ ಇದೆ ಎಂದು ಬಿಜೆಪಿ ಕಾಸರಗೋಡು ಜಿಲ್ಲಾಧ್ಯಕ್ಷೆ ಎಂ.ಎಲ್. ಅಶ್ವಿನಿ ಹೇಳಿದರು.

ಬಂಬ್ರಾಣದಲ್ಲಿ ಭಾನುವಾರ ವಿವಿಧ ವಾರ್ಡ್‌ಗಳ ಜಂಟಿ ಚುನಾವಣಾ ಸಮಾವೇಶವ ಉದ್ಘಾಟಿಸಿ ಮಾತನಾಡಿ, ಜಲಜೀವನ್ ಮಿಷನ್ ಅನುಷ್ಠಾನದಲ್ಲಿ ಕಾಸರಗೋಡು ಜಿಲ್ಲೆ ಹಿಂದುಳಿದಿದೆ. ಡಯಾಲಿಸಿಸ್ ಸೇವೆಗಳನ್ನು ಒದಗಿಸುವ ಆಸ್ಪತ್ರೆಗಳು ಮತ್ತು ಖಾಸಗಿ ಸಂಸ್ಥೆಗಳ ಬಾಕಿ ಹಣ ಪಾವತಿಸಲು ರಾಜ್ಯ ಸರ್ಕಾರ ವಿಫಲವಾಗಿದೆ. ಬಿಹಾರದಲ್ಲಿ ನಿತೀಶ್ ಕುಮಾರ್ ನೇತೃತ್ವದಲ್ಲಿ ವಿವಿಧ ಕಲ್ಯಾಣ ಯೋಜನೆಗಳ ಅನುಷ್ಠಾನದಿಂದ ಮತದಾರರ ಹೃದಯಗಳನ್ನು ಗೆಲ್ಲಲು ಸಾಧ್ಯವಾಯಿತು ಎಂದರು.

ಬಿಜೆಪಿ ಕುಂಬಳೆ ಗ್ರಾಮ ಪಂಚಾಯತಿ ಉತ್ತರ ವಲಯ ಸಮಿತಿ ಅಧ್ಯಕ್ಷ ಶಿವಪ್ರಸಾದ್ ರೈ ಅಧ್ಯಕ್ಷತೆ ವಹಿಸಿದ್ದರು. ಬಿಜೆಪಿ ರಾಜ್ಯ ಸಮಿತಿ ಸದಸ್ಯರಾದ ವಿ.ರವೀಂದ್ರನ್, ಕೋಳಾರು ಸತೀಶ್ಚಂದ್ರ ಭಂಡಾರಿ, ಸುರೇಶ್ ಕುಮಾರ್ ಶೆಟ್ಟಿ ಪೂಕಟ್ಟೆ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಪಿ.ಆರ್.ಸುನೀಲ್, ಈಶ್ವರ ಶೆಟ್ಟಿ, ಕುಂಬಳೆ ಮಂಡಲ ಕೋಶಾಧಿಕಾರಿ ರಾಧಾಕೃಷ್ಣ ರೈ, ಕಾರ್ಯದರ್ಶಿ ಪ್ರದೀಪ್ ಕುಮಾರ್, ಪುಷ್ಪಲತಾ ಶೆಟ್ಟಿ, ಪ್ರೇಮಲತಾ, ಮೋಹನ್ ಬಂಬ್ರಾಣ, ಭೋಜರಾಜ್, ರಾಜೇಶ್ ಉಜಾರ್, ಶ್ರೀನಿವಾಸ ಆಳ್ವ ಕಳತ್ತೂರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net