ಮಂಗಳೂರು: ಚೆನ್ನೈ ಲಹರಿ ಯುಗಾದಿ ಕಥಾ ಸ್ಪರ್ಧೆ ಆಯೋಜಿಸಿದ್ದು, ಫೆ.15ರ ಒಳಗೆ ನುಡಿ ಲಿಪಿಯಲ್ಲಿ ಟೈಪ್ ಮಾಡಿದ 3000 ಪದಗಳ ಮಿತಿಯಲ್ಲಿ ಬರೆದ ಕಥೆ ಆಹ್ವಾನಿಸಲಾಗಿದೆ.
ಮೊದಲ ಬಹುಮಾನ 6 ಸಾವಿರ ರೂ., ದ್ವಿತೀಯ ಬಹುಮಾನ 3000 ರೂ. ಹಾಗೂ ತೃತೀಯ ಬಹುಮಾನ 2 ಸಾವಿರ ರೂ. ಜೊತೆಗೆ 1000 ರೂ.ಗಳ 5 ಸಮಾಧಾನಕರ ಬಹುಮಾನಗಳಿವೆ. ನಿಮ್ಮ ಕಥೆಗಳನ್ನು laharibalaga@gmail.com ಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ 9449821225 ಗೆ ಸಂಪರ್ಕಿಸಲು ಪ್ರಕಟಣೆ ತಿಳಿಸಿದೆ.