ದೂರುದಾರರಿಗೆ ಸಾಮಾಜಿಕ ಜಾಲತಾಣ ಮೂಲಕ ಅಪರಿಚಿತ ವ್ಯಕ್ತಿ ಸುಹಾನಿ ಪಟೇಲ್ ಎಂದು ಪರಿಚಯ ಮಾಡಿಕೊಂಡು ಹಂತ ಹಂತವಾಗಿ 10,55,000ರೂ. ಹಣ ಹೂಡಿಕೆ ಮಾಡಿಸಿದ್ದಾನೆ. ಈ ಮೊತ್ತ ಆತ ಹೇಳಿದ ಆ್ಯಪ್‌ನಲ್ಲಿ 60ಲಕ್ಷ ರೂ. ಎಂದು ತೋರಿಸುತ್ತಿತ್ತು. ದೂರುದಾರರು ಹಣದ ಅವಶ್ಯಕತೆಯಿಂದ ಹಣ ಡ್ರಾ ಮಾಡಲು ಯತ್ನಿಸಿದಾಗ ಸಾಧ್ಯವಾಗಿಲ್ಲ. ಈ ಬಗ್ಗೆ ಕಸ್ಟಮರ್ ಸರ್ವಿಸ್‌ಗೆ ವಿಚಾರಿಸಿದಾಗ ಶೇ.30 ಟ್ಯಾಕ್ಸ್ ಮೊತ್ತವನ್ನು ಮೊದಲು ಹಾಕಿದರೆ ಹಣ ವಿತ್ ಡ್ರಾ ಮಾಡಬಹುದೆಂದು ತಿಳಿಸಿದ್ದಾರೆ. ಇದು ಬ್ಯಾಂಕ್‌ನವರಿಗೆ ತಿಳಿಸಿದಾಗ ಇದೊಂದು ವಂಚನಾ ಜಾಲ ಎಂದು ಹೇಳಿದ್ದಾರೆ. ಈ ಸಂದೇಶವನ್ನು ಕಳುಹಿಸಿದ ಕೂಡಲೇ ಆಪ್‌ನಲ್ಲಿರುವ ಹಣವನ್ನು ಶೂನ್ಯ ಮಾಡಿ ಬ್ಲಾಕ್ ಮಾಡಿದ್ದಾರೆ.