ರಸ್ತೆ ದುರಸ್ತಿ ಆಗ್ರಹಿಸಿ ಪ್ರತಿಭಟನೆ Interstate Road

ರಸ್ತೆ ದುರಸ್ತಿಗಾಗಿ ಆಗ್ರಹಿಸಿ ನೆಲ್ಲಿಕಟ್ಟೆ ಜಂಕ್ಷನ್‌ನಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
ರಸ್ತೆ ದುರಸ್ತಿಗಾಗಿ ಆಗ್ರಹಿಸಿ ನೆಲ್ಲಿಕಟ್ಟೆ ಜಂಕ್ಷನ್‌ನಲ್ಲಿ ಸ್ಥಳೀಯರು ಪ್ರತಿಭಟನೆ ನಡೆಸಿದರು.
Published on

ಪ್ರಮುಖ ಮುಖ್ಯಾಂಶಗಳು

  • ಬೃಹತ್ ಲಾರಿಗಳ ಸಂಚಾರದಿಂದ ಸಮಸ್ಯೆ ಆರೋಪ
ವಿಟ್ಲ: ಕನ್ಯಾನ- ಮುಗುಳಿ- ಉಪ್ಪಳ ಅಂತಾರಾಜ್ಯ ರಸ್ತೆಯಲ್ಲಿ ಧಾರಣಾ ಸಾಮರ್ಥ್ಯಕ್ಕಿಂತ ಹೆಚ್ಚಿನ ಲಾರಿಗಳು ಸಂಚರಿಸಿ, ರಸ್ತೆ ಸಂಪೂರ್ಣ ಹದಗೆಟ್ಟಿರುವುದನ್ನು ಖಂಡಿಸಿ ಸ್ಥಳೀಯರು ನೆಲ್ಲಿಕಟ್ಟೆ ಜಂಕ್ಷನಲ್ಲಿ ಮಂಗಳವಾರ ಪ್ರತಿಭಟನೆ ನಡೆಸಿದರು.
ನೆಲ್ಲಿಕಟ್ಟೆಯಿಂದ ಮುಗುಳಿ ಗಡಿವರೆಗಿನ ರಸ್ತೆ ೩.೪ ಕಿ.ಮೀ. ಇದ್ದು, ಇಲಾಖೆ ಮಾಹಿತಿ ಪ್ರಕಾರ ಧಾರಣಾ ಸಾಮರ್ಥ್ಯ ಗರಿಷ್ಠ ೧೮ ಟನ್. ಇಲ್ಲಿ ಭಾರಿ ವಾಹನ ಸಂಚಾರ ನಿಷೇಧಿಸಬೇಕು. ರಸ್ತೆ ಅಭಿವೃದ್ಧಿಗೊಳಿಸಲು ಸಂಬಂಧಪಟ್ಟವರಿಗೆ ಮನವರಿಕೆ ಮಾಡಬೇಕು. ಹಗಲು ಹೊತ್ತಿನಲ್ಲಿ ಶಾಲಾ ಮಕ್ಕಳು ಸೇರಿದಂತೆ ಸಾರ್ವಜನಿಕರ ಸಂಚಾರಕ್ಕೆ ಅಪಾಯಕಾರಿಯಾಗಿ ಸಂಚರಿಸುವ ಭಾರಿ ವಾಹನ ಸಂಚಾರ ನಿಷೇಽಸಲು ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸುವಂತೆ ಆಗ್ರಹ ವ್ಯಕ್ತವಾಯಿತು.
ಮುಗುಳಿಯಲ್ಲಿ ಬೆಳಗ್ಗೆ ಮರ ಬಿದ್ದು ಕೆಲ ಸಮಯದವರೆಗೆ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಪ್ರತಿಭಟನೆ ಬೆಂಬಲಿಸಿ ಕನ್ಯಾನ ಉಪ್ಪಳ ನಡುವೆ ಸಂಚರಿಸುವ ಬಸ್ಸು, ಆಟೋರಿಕ್ಷಾ, ವಾಣಿಜ್ಯ ವಾಹನ ಸಂಚಾರ ಸ್ವಯಂಪ್ರೇರಿತವಾಗಿ ನಿಲುಗಡೆಯಾಗಿತ್ತು. ಪ್ರತಿಭಟನಾ ಸ್ಥಳಕ್ಕೆ ಜಿಪಂ ಸಹಾಯಕ ಇಂಜಿನಿಯರ್ ಜಗದೀಶ್, ಬಂಟ್ವಾಳ ಪ್ರಾದೇಶಿಕ ಸಾರಿಗೆ ಇಲಾಖೆಯ ಮೋಟಾರು ವಾಹನ ನಿರೀಕ್ಷಕ ಪ್ರಮೋದ್ ಎಂ.ಭಟ್, ಸಚಿನ್ ಸ್ಥಳಕ್ಕಾಗಮಿಸಿ ಅಗತ್ಯ ಕ್ರಮದ ಭರವಸೆ ನೀಡಿದ ನಂತರ ಪ್ರತಿಭಟನೆ ಹಿಂಪಡೆಯಲಾಯಿತು.
ಕರೋಪಾಡಿ ಗ್ರಾಪಂ ಅಧ್ಯಕ್ಷೆ ಸೂರ್ಯಕಾಂತಿ, ಉಪಾಧ್ಯಕ್ಷ ಅನ್ವರ್ ಕರೋಪಾಡಿ, ಕನ್ಯಾನ ಗ್ರಾಪಂ ಸದಸ್ಯರಾದ ಕೆ.ಪಿ.ರಘುರಾಮ ಶೆಟ್ಟಿ, ಅಬ್ದುಲ್ ಮಜೀದ್, ಪ್ರಮುಖರಾದ ಮೊದು ಕುಂಞಿ ಮಂಡ್ಯೂರು, ಶ್ರೀನಿವಾಸ ಭಟ್ ಕಮ್ಮಾಜೆ, ಇಸ್ಮೈಲ್ ಬಂಡಿತಡ್ಕ, ಸ್ಥಳೀಯರಾದ ವೆಂಕಟರಮಣ ಬೆಟ್ಟ ಪಾದೇಕಲ್ಲು, ಗಣೇಶ್ ಮಂಡ್ಯೂರು, ಡಾ.ರಾಮಚಂದ್ರ ಕೆ., ಸಫ್ವಾನ್ ಪಾಡಿ, ತಾರಾನಾಥ ಒಡಿಯೂರು, ಅಬ್ದುಲ್ ಹಮೀದ್ ಪಾದೆಕಲ್ಲು, ಅಬ್ದುಲ್ ಹಕೀಂ ಪಾದೆಕಲ್ಲು, ಆನಂದ ಪಾದೆಕಲ್ಲು, ರಾಧಾಕೃಷ್ಣ ಒಡಿಯೂರು, ಶರೀಫ್ ಕರೋಪಾಡಿ, ಶಾಕಿರ್ ಸಮಡ್ಕ, ಕುಂಞಿ ಮೋನು ಮಂಡ್ಯೂರು, ಸುರೇಶ್ ಪಾದೆಕಲ್ಲು, ವಿಶ್ವನಾಥ ಪಾದೆಕಲ್ಲು, ಮೀನಾಕ್ಷಿ ಚೆಲ್ಲಂಗಾರು, ಭಾರತಿ ಚೆಲ್ಲಂಗಾರು, ಶಕುಂತಲಾ ಚೆಲ್ಲಂಗಾರು, ಮೊಯಿದು ಕುಂಞಿ ಪಾದೆಕಲ್ಲು ಮತ್ತಿತರರಿದ್ದರು.
"

ಇದು ಜಿಲ್ಲಾ ಪಂಚಾಯಿತಿ ಗ್ರಾಮಾಂತರ ರಸ್ತೆಯಾಗಿದ್ದು, ಇಲ್ಲಿ ಸರಕು ಸಾಗಾಟ ಮಾಡುವ ವಾಹನಗಳ ಮಿತಿ ೧೬ ಟನ್ ಮಾತ್ರ ಎಂದು ಅಧಿಕಾರಿಗಳು ಲಿಖಿತವಾಗಿ ತಿಳಿಸಿದ್ದಾರೆ. ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ರಸ್ತೆಯನ್ನು ಸರಿಪಡಿಸಬೇಕು. ಹೋರಾಟ ತೀವ್ರ ಸ್ವರೂಪ ಪಡೆಯುವ ಮೊದಲು ಸಂಬಂಧಪಟ್ಟ ಅಧಿಕಾರಿಗಳು ಈ ಬಗ್ಗೆ ಸೂಕ್ತ ಕ್ರಮಕೈಗೊಳ್ಳಬೇಕು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net