ಕ್ರೀಡಾಸ್ಪೂರ್ತಿ ಹೆಚ್ಚಿಸುವ ಉದ್ದೇಶದಿಂದ ಮಾಸ್ಟರ್ಸ್ ಅಥ್ಲೆಟಿಕ್ಸ್ ನಡೆಯುವ ಸಂದರ್ಭದಲ್ಲೇ 10, 12 ಮತ್ತು 14 ವರ್ಷದ ಕೆಳಗಿನ ವಯೋಮಿತಿಯ ಗಂಡು ಮತ್ತು ಹೆಣ್ಣು ಮಕ್ಕಳಿಗೆ 400, 200, 100 ಮತ್ತು 60 ಮೀ. ಓಟ, ಲಾಂಗ್‌ಜಂಪ್, ಶಾಟ್‌ಪುಟ್ ಮತ್ತು ಜಾವೆಲಿನ್ ಕ್ರೀಡೆಯನ್ನೂ ಆಯೋಜಿಸಲಾಗಿದೆ. ಸ್ಪರ್ಧಿಗಳು ಶುಲ್ಕವನ್ನು ನೀಡಿ ಸೆ. 16ರ ಒಳಗೆ ಆನ್‌ಲೈನ್‌ನಲ್ಲಿ ನೋಂದಣಿ ಮಾಡಿಸಿಕೊಳ್ಳಬೇಕು. ವಿಜೇತರಿಗೆ ಪದಕ ಮತ್ತು ಪ್ರಮಾಣಪತ್ರ ನೀಡಲಾಗುತ್ತದೆ ಎಂದವರು ತಿಳಿಸಿದರು.