ಆದಾನಿ ಪವರ್ ಲಿಮಿಟೆಡ್ ಟಿಪಿಪಿಗೆ ವಿದ್ಯಾರ್ಥಿಗಳ ಕೈಗಾರಿಕಾ ಭೇಟಿ

ಡಾ.ಪಿ. ದಯಾನಂದ ಪೈ – ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು
ಆದಾನಿ ಪವರ್ ಲಿಮಿಟೆಡ್, ಉಡುಪಿ ಥರ್ಮಲ್ ಪವರ್ ಪ್ರಾಜೆಕ್ಟ್ (TPP) ಗೆ ಮಂಗಳೂರಿನ ಡಾ. ಪಿ. ದಯಾನಂದ ಪೈ – ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಕೈಗಾರಿಕಾ ಭೇಟಿ ನಡೆಸಿದರು.
ಆದಾನಿ ಪವರ್ ಲಿಮಿಟೆಡ್, ಉಡುಪಿ ಥರ್ಮಲ್ ಪವರ್ ಪ್ರಾಜೆಕ್ಟ್ (TPP) ಗೆ ಮಂಗಳೂರಿನ ಡಾ. ಪಿ. ದಯಾನಂದ ಪೈ – ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳ ಕೈಗಾರಿಕಾ ಭೇಟಿ ನಡೆಸಿದರು.
Published on: 

ಮಂಗಳೂರು: ಮಂಗಳೂರಿನ ಡಾ. ಪಿ. ದಯಾನಂದ ಪೈ – ಪಿ. ಸತೀಶ ಪೈ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ರಥ ಬೀದಿ, ಇಲ್ಲಿನ III ಬಿಬಿಎ ವಿಭಾಗದ 48 ವಿದ್ಯಾರ್ಥಿಗಳು ಸೆಪ್ಟೆಂಬರ್ 22ರಂದು ಆದಾನಿ ಪವರ್ ಲಿಮಿಟೆಡ್, ಉಡುಪಿ ಥರ್ಮಲ್ ಪವರ್ ಪ್ರಾಜೆಕ್ಟ್ (TPP) ಗೆ ಕೈಗಾರಿಕಾ ಭೇಟಿ ನಡೆಸಿದರು.

ಕಾಲೇಜಿನ ವಾಣಿಜ್ಯ ವಿಭಾಗದ ಸಹ ಪ್ರಾಧ್ಯಾಪಕಿ ಹಾಗೂ ಬಿಬಿಎ ವಿಭಾಗದ ಮುಖ್ಯಸ್ಥೆ ಡಾ. ಮಾಲತಿ ಕೆ. ಅವರು ಸಂಯೋಜಿಸಿದರು. ಬಿಬಿಎ ವಿಭಾಗದ ಅಧ್ಯಾಪಕರಾದ ಶ್ರೀ ಪ್ರಶಾಂತ್ ಕೆ. ಅವರು ವಿದ್ಯಾರ್ಥಿಗಳೊಂದಿಗೆ ಭಾಗವಹಿಸಿ ಭೇಟಿ ಯಶಸ್ವಿಯಾಗಿ ನಡೆಯಲು ಸಹಕರಿಸಿದರು.

ಆದಾನಿ ಪವರ್ ಲಿಮಿಟೆಡ್ ಉಡುಪಿಯ ಉಡಾನ್ ಯೋಜನಾ ಅಧಿಕಾರಿಗಳಾದ ಶ್ರೀ ಅರುಣ್ ಕುಮಾರ್ ಅವರು ಕೈಗಾರಿಕಾ ಭೇಟಿಯ ವ್ಯವಸ್ಥೆ ಹಾಗೂ ಅಗತ್ಯ ಸಹಕಾರವನ್ನು ಕಲ್ಪಿಸಿದರು. ಸಂಸ್ಥೆಯ ಸಹಾಯಕ ಪ್ರಧಾನ ವ್ಯವಸ್ಥಾಪಕರಾದ ಶ್ರೀ ಗಜಾನನ ತಿಮ್ಮಣ್ಣ ಹೆಗ್ಡೆ ಅವರು ಪವರ್‌ಪಾಯಿಂಟ್ ಪ್ರಸ್ತುತಿ ಮೂಲಕ ವಿದ್ಯಾರ್ಥಿಗಳಿಗೆ ಕೈಗಾರಿಕಾ ಕಾರ್ಯವೈಖರಿ, ವಿದ್ಯುತ್ ಉತ್ಪಾದನಾ ಪ್ರಕ್ರಿಯೆ, ಆಧುನಿಕ ತಂತ್ರಜ್ಞಾನ ಹಾಗೂ ಸುರಕ್ಷತಾ ಕ್ರಮಗಳ ಕುರಿತು ಸಮಗ್ರ ಮಾಹಿತಿ ನೀಡಿದರು.

ಫೀಲ್ಡ್ ಟ್ರೈನರ್ ಶ್ರೀ ಗಣೇಶ್ ಅವರು ಯೋಜನೆಯ ವಿವಿಧ ಘಟಕಗಳಿಗೆ ವಿದ್ಯಾರ್ಥಿಗಳನ್ನು ಕರೆದೊಯ್ದು ಫೀಲ್ಡ್ ವಿಸಿಟ್‌ಗೆ ಮಾರ್ಗದರ್ಶನ ನೀಡಿದರು. ಇದರಿಂದ ವಿದ್ಯಾರ್ಥಿಗಳು ಪಠ್ಯಕ್ರಮದ ಜ್ಞಾನವನ್ನು ಪ್ರಾಯೋಗಿಕ ಅನುಭವದೊಂದಿಗೆ ಸಂಯೋಜಿಸಿಕೊಳ್ಳುವ ಅವಕಾಶ ಪಡೆದರು.

ಸಂಸ್ಥೆಯ ವತಿಯಿಂದ ವಿದ್ಯಾರ್ಥಿಗಳಿಗೆ ಕ್ಯಾಪ್, ಟಿ-ಶರ್ಟ್ ಹಾಗೂ ಮಧ್ಯಾಹ್ನದ ಊಟದ ವ್ಯವಸ್ಥೆ ಮಾಡಲಾಗಿತ್ತು..ಈ ಕೈಗಾರಿಕಾ ಭೇಟಿ ವಿದ್ಯಾರ್ಥಿಗಳಲ್ಲಿ ಕೈಗಾರಿಕಾ ಜ್ಞಾನ, ವೃತ್ತಿಪರ ಕೌಶಲ್ಯ ಮತ್ತು ಉದ್ಯೋಗಾವಕಾಶಗಳ ಕುರಿತು ಅರಿವು ಹೆಚ್ಚಿಸುವಲ್ಲಿ ಮಹತ್ವದ ಪಾತ್ರ ವಹಿಸಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net