ರೈತರಲ್ಲಿಗೆ ತೆರಳಿ ಕೆಲಸ ಮಾಡಲಿ : ಸಚಿವ ಪಿ.ಪ್ರಸಾದ್ ಸಲಹೆ

ಮೀಂಜ ಗ್ರಾಪಂ ಕೃಷಿ ಭವನ ಕೃಷಿ, ಅಭಿವೃದ್ಧಿ ಮತ್ತು ರೈತ ಕಲ್ಯಾಣ ಸಚಿವ ಪಿ. ಪ್ರಸಾದ್ ಉದ್ಘಾಟಿಸಿದರು.
ಮೀಂಜ ಗ್ರಾಪಂ ಕೃಷಿ ಭವನ ಕೃಷಿ, ಅಭಿವೃದ್ಧಿ ಮತ್ತು ರೈತ ಕಲ್ಯಾಣ ಸಚಿವ ಪಿ. ಪ್ರಸಾದ್ ಉದ್ಘಾಟಿಸಿದರು.
Published on

ಮಂಜೇಶ್ವರ: ಕೃಷಿ ಇಲಾಖೆ ಅಧಿಕಾರಿಗಳು ರೈತರಿರುವಲ್ಲಿಗೆ ತೆರಳಿ ಅವರಿಗಾಗಿ ಕೆಲಸ ಮಾಡಬೇಕು ಎಂದು ಕೃಷಿ, ಅಭಿವೃದ್ಧಿ ಮತ್ತು ರೈತ ಕಲ್ಯಾಣ ಸಚಿವ ಪಿ. ಪ್ರಸಾದ್ ಹೇಳಿದರು.

ಮೀಂಜ ಗ್ರಾಪಂ ಕೃಷಿ ಭವನ ಉದ್ಘಾಟಿಸಿ ಮಾತನಾಡಿದರು.

ಕಿಸಾನ್ ಗೋಷ್ಠಿಯನ್ನು ಮೀಂಜ ಗ್ರಾಪಂ ಅಧ್ಯಕ್ಷೆ ಸುಂದರಿ ಆರ್ ಶೆಟ್ಟಿ ಉದ್ಘಾಟಿಸಿದರು. ಶಾಸಕ ಎ.ಕೆ.ಎಂ. ಅಶ್ರಫ್ ಅಧ್ಯಕ್ಷತೆ ವಹಿಸಿದ್ದರು. ಸಂಸದ ರಾಜಮೋಹನ್ ಉಣ್ಣಿತ್ತಾನ್ ಮತ್ತು ಮಂಜೇಶ್ವರ ಬ್ಲಾಕ್ ಪಂಚಾಯತಿ ಅಧ್ಯಕ್ಷೆ ಶಮೀಮಾ ಮುಖ್ಯ ಅತಿಥಿಗಳಾಗಿದ್ದರು.

ಮಂಜೇಶ್ವರ ಬ್ಲಾಕ್ ಪಂಚಾಯತಿ ಉಪಾಧ್ಯಕ್ಷ ಮುಹಮ್ಮದ್ ಹನೀಫಾ, ಮೀಂಜ ಗ್ರಾಪಂ ಉಪಾಧ್ಯಕ್ಷ ಜಯರಾಮ ಬಲ್ಲಂಗುಡೇಲು, ಮೀಂಜ ಗ್ರಾಪಂ ಸ್ಥಾಯಿ ಸಮಿತಿ ಅಧ್ಯಕ್ಷರಾದ ರುಖಿಯಾ ಸಿದ್ದೀಕ್, ಬಾಬು, ಸರಸ್ವತಿ, ಜಿಪಂ ಸದಸ್ಯರಾದ ಗೋಲ್ಡನ್ ರಹಮಾನ್, ಕಮಲಾಕ್ಷಿ, ಮಂಜೇಶ್ವರ ಬ್ಲಾಕ್ ಪಂಚಾಯಿತಿ ಸದಸ್ಯರಾದ ಎಂ.ಎಲ್.ಅಶ್ವಿನಿ, ಕೆ.ವಿ.ರಾಧಾಕೃಷ್ಣ, ಮಂಜೇಶ್ವರ ಕೃಷಿ ಸಹಾಯಕ ನಿರ್ದೇಶಕ ಅರುಣ್ ಪ್ರಸಾದ್, ಮೀಂಜ ಗ್ರಾಪಂ ಸದಸ್ಯರಾದ ಮಿಸ್ರಿಯಾ ಎಂ ಕುಂಞ್ಞೆ, ನಾರಾಯಣ ತುಂಗಾ, ಜ್ಯೋತಿ ಪಿ. ರೈ, ಕುಸುಮಾ ಮೋಹನ್, ಕೆ. ಚಂದ್ರಶೇಖರ, ಜನಾರ್ದನ ಪೂಜಾರಿ, ಬಿ.ಎಂ.ಆಶಾಲತಾ, ರೇಖಾ ಶರತ್, ಜಿ.ವಿನೋದ್, ಎಂ.ಅಬ್ದುಲ್ ರಜಾಕ್, ಮೀಂಜ ಗ್ರಾಪಂ ಸಿಡಿಎಸ್ ಅಧ್ಯಕ್ಷೆ ಶಾಲಿನಿ ಬಿ.ಶೆಟ್ಟಿ, ವಿವಿಧ ರಾಜಕೀಯ ಪಕ್ಷಗಳ ಪ್ರತಿನಿಧಿಗಳಾದ ವಿ.ವಿ.ರಮೇಶ, ರಾಮಕೃಷ್ಣ ಕಡಂಬಾರ್, ಎಂ.ಕೆ.ಮಹಮ್ಮದ್, ಬಿ.ಎಂ.ಆದರ್ಶ, ಅಝೀಝ್ ಮರಿಕೆ, ರಾವ ಚೇರಾಲು, ಮುಹಮ್ಮದ್ ಕೈಕಂಬ, ಹಮೀದ್, ತಾಜುದ್ದೀನ್ ಕುಂಬಳೆ ಮಾತನಾಡಿದರು. ಪ್ರಧಾನ ಕೃಷಿ ಅಧಿಕಾರಿ ಪಿ.ರಾವೇಂದ್ರ ಸ್ವಾಗತಿಸಿದರು. ಮೀಂಜ ಕೃಷಿ ಭವನ ಕೃಷಿ ಅಧಿಕಾರಿ ಎ.ಚಂಚಲಾ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net