ಆಂತರ್ಯದ ಭಕ್ತಿ ಶ್ರದ್ಧೆಯಿಂದ ಉನ್ನತ ಸ್ಥಾನ : ವೈಎಂಕೆ ಡಾ.ಅಬ್ದುಲ್ಲ ಕುಂಞಿ

ಕಾಜೂರು ಮಖಾಂ ಶರೀಫ್‌ನಲ್ಲಿ ಉರುಸ್ ಉದ್ಘಾಟನಾ ಸಮಾರಂಭದಲ್ಲಿ ಯೆನಪೋಯ ಸ್ವಾಯತ್ತ ವಿಶ್ವವಿದ್ಯಾಲಯದ ಕುಲಪತಿ ವೈ.ಎಂ.ಕೆ ಡಾ.ಅಬ್ದುಲ್ಲ ಕುಂಞಿ ಮಾತನಾಡಿದರು.
ಕಾಜೂರು ಮಖಾಂ ಶರೀಫ್‌ನಲ್ಲಿ ಉರುಸ್ ಉದ್ಘಾಟನಾ ಸಮಾರಂಭದಲ್ಲಿ ಯೆನಪೋಯ ಸ್ವಾಯತ್ತ ವಿಶ್ವವಿದ್ಯಾಲಯದ ಕುಲಪತಿ ವೈ.ಎಂ.ಕೆ ಡಾ.ಅಬ್ದುಲ್ಲ ಕುಂಞಿ ಮಾತನಾಡಿದರು.
Published on
ಕಾಜೂರು ಮಖಾಂ ಶರೀಫ್‌ನಲ್ಲಿ ಅಂತ್ಯ ವಿಶ್ರಾಂತಿ ಪಡೆಯುತ್ತಿರುವ ಅಲ್ಲಾಹನ ಇಷ್ಟ ದಾಸರಾದ ಔಲಿಯಾಗಳು ಆಂತರ್ಯದ ಭಕ್ತಿ ಶ್ರದ್ಧೆಯಿಂದ ಅಲ್ಲಾಹನೆಡೆಯಲ್ಲಿ ಉನ್ನತ ಸ್ಥಾನ ಪಡೆದುಕೊಂಡಿದ್ದಾರೆ ಎಂದು ಯೆನಪೋಯ ಸ್ವಾಯತ್ತ ವಿಶ್ವವಿದ್ಯಾಲಯದ ಕುಲಪತಿ ವೈಎಂಕೆ ಡಾ.ಅಬ್ದುಲ್ಲ ಕುಂಞಿ ಹೇಳಿದರು.
ದಕ್ಷಿಣ ಭಾರತದ ಅಜ್ಮೀರ್‌ಎಂದೇ ಖ್ಯಾತಿಯಾಗಿರುವ ಕಾಜೂರು ಮಖಾಂ ಶರೀಫ್‌ನಲ್ಲಿ ಆರಂಭಗೊಂಡ ಉರುಸ್ ಉದ್ಘಾಟನಾ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕರ್ನಾಟಕ ಅಲೈಡ್ ಹೆಲ್ತ್ ಕೇರ್ ಕೌನ್ಸಿಲ್ ಚೇರ್ಮನ್ ಡಾ.ಯು.ಟಿ.ಇಫ್ತಿಕಾರ್ ಅಲಿ ಮಾತನಾಡಿದರು.
ಸಯ್ಯಿದ್ ಇಸ್ಮಾಯಿಲ್ ತಂಙಳ್ ಉಜಿರೆ, ನೂರುದ್ದೀನ್ ಸಾಲ್ಮರ, ಅಕ್ಬರ್ ಬೆಳ್ತಂಗಡಿ, ಸಿರಾಜುದ್ದೀನ್ ಸಖಾಫಿ ಪೀಚಲಾರ್, ಡಿ.ಡಿ.ಅಬ್ದುಲ್ ರಝಾಕ್ ಕನ್ನಡಿಕಟ್ಟೆ, ಕಿಲ್ಲೂರು ಮುದರ್ರಿಸ್ ಅಬ್ದುಲ್ ರಹಿಮಾನ್ ಬಾಖವಿ ಕಕ್ಕಿಂಜೆ, ಉರುಸ್ ಸಮಿತಿ ಉಪಾಧ್ಯಕ್ಷ ಅಬ್ದುಲ್ ಅಝೀಝ್ ಝುಹುರಿ ಕಿಲ್ಲೂರು, ಪ್ರಮುಖರಾದ ಡಿ.ವೈ.ಉಮರ್, ಬದ್ರುದ್ದೀನ್ ಕಾಜೂರು, ಅಶ್ರಫ್ ಕಿಲ್ಲೂರು, ನಝೀರ್ ಮಠ, ಚಾರ್ಮಾಡಿ ಹಸನಬ್ಬ, ಕೆ.ಯು.ಉಮರ್ ಸಖಾಫಿ, ಕೆ.ಮುಹಮ್ಮದ್ ಪುತ್ತುಮೋನು ಕಿಲ್ಲೂರು, ಅಬ್ದುಲ್ ರಝಾಕ್ ಸಖಾಫಿ ಮಡಂತ್ಯಾರ್, ಸಾದಿಕ್ ಮಲೆಬೆಟ್ಟು, ದಾಸಪ್ಪ ಗೌಡ ಕಾಂಜಾನು, ಕೆ.ಯು.ಮುಹಮ್ಮದ್ ಮಲವಂತಿಗೆ, ಶಾಹುಲ್ ಹಮೀದ್ ಮಿತ್ತಬಾಗಿಲು, ಮುಹಮ್ಮದ್ ರಫಿ ಬೆಳ್ತಂಗಡಿ, ಕೆ.ಶೇಖಬ್ಬ ಕುಕ್ಕಾವು, ಬಿ.ಎ.ಯೂಸುಫ್ ಶರೀಫ್, ಇಬ್ರಾಹಿಂ ಮದನಿ, ಚಂದ್ರಶೇಖರ ಗೌಡ, ಬಿ.ಎಚ್.ಅಬೂಬಕ್ಕರ್, ಜೆ.ಎಚ್.ಅಬ್ಬಾಸ್, ಕೆ.ಎಚ್.ಮುಹಮ್ಮದ್, ಸಲೀಂ ಪೀಚಲಾರ್, ಅಬ್ದುಲ್ ರಹಿಮಾನ್ ಬಿ.ಆರ್.ಆರ್., ಮುಸ್ತಫ ರೂಬಿ ಕಾಟಿಪಳ್ಳ, ಯು.ಕೆ.ಅಬ್ದುಲ್ ಶುಕೂರ್, ಅಬ್ದುಲ್ ಸಮದ್, ಅನ್ಸಾರ್ ತಾಜ್ ಲಾಯಿಲ, ಅಬ್ದುಲ್ ಹನೀಫ್ ಲಾಯಿಲ, ಬಿ.ಎಂ.ಇಲ್ಯಾಸ್, ಸುಲೈಮಾನ್ ಚಾರ್ಮಾಡಿ, ಹಾರಿಸ್ ಪುತ್ರಬೈಲು, ಅಬ್ದುಲ್ ಮುತ್ತಲಿಬ್ ಇಂದಬೆಟ್ಟು, ವಝೀರ್ ಮುಹಮ್ಮದ್ ಬಂಗಾಡಿ, ಹಮೀದ್ ಎರ್ಮಾಳ, ಬಿ.ಸಲೀಂ ಬೆದ್ರಬೆಟ್ಟು, ಮುಹಮ್ಮದ್ ಪೆರ್ದಾಡಿ, ಮುಹಮ್ಮದ್ ಕೊಲ್ಲಿಬೆಟ್ಟು, ಕೆ.ಪಿ.ಮುಹಮ್ಮದ್ ಕಾಜೂರು, ನಝೀರ್ ಪೆರ್ದಾಡಿ, ಶರೀಫ್ ಮುಈನಿ ಪೆರ್ದಾಡಿ, ವಝೀರ್ ಕೋಟೆಹೊಳೆ ಕಳಸ ಮೊದಲಾದವರು ಉಪಸ್ಥಿತರಿದ್ದರು.

ಕಾಜೂರಿಗೆ ಶಾದಿಮಹಲ್ ನಿರ್ಮಾಣ ಉದ್ದೇಶಕ್ಕೆ ಸಚಿವ ಝಮೀರ್ ಅಹಮ್ಮದ್ ಬಳಿ ನಿಮ್ಮ ನಿಯೋಗ ಕರೆದುಕೊಂಡು ಹೋಗಲಾಗುವುದು. ಈ ಪ್ರದೇಶದಲ್ಲಿ ವೈದ್ಯಕೀಯ ಶಿಕ್ಷಣ, ಪ್ಯಾರಾ ಮೆಡಿಕಲ್ ಇತ್ಯಾದಿ ಅಧ್ಯಯನಾಸಕ್ತ ಅರ್ಹ ವಿದ್ಯಾರ್ಥಿಗಳಿದ್ದರೆ ಅಂಥವರಿಗೆ ನಮ್ಮ ಫೌಂಡೇಶನ್ ಮೂಲಕ ಕಲಿಕಾ ಅವಕಾಶ ಕಲ್ಪಿಸಿಕೊಡಲಾಗುವುದು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net