ಈ ಮೇಳದಲ್ಲಿ ದ್ರಾಕ್ಷಾ ರಸದ ಆರೋಗ್ಯಕಾರಿ ಉಪಯೋಗಗಳು, ಸವಿಯುವ ಕ್ರಮ, ದಾಸ್ತಾನು ವಿಧಾನಗಳು ಸೇರಿದಂತೆ ಅಗತ್ಯ ಮಾಹಿತಿಗಳೊಂದಿಗೆ ರಾಜ್ಯ, ರಾಷ್ಟ್ರ ಹಾಗೂ ಅಂತರಾಷ್ಟ್ರೀಯ ಮಟ್ಟದ ನೂರಾರು ಬ್ರಾಂಡ್‌ಗಳ ವೈನ್ ಪ್ರದರ್ಶನಕ್ಕೆ ಅವಕಾಶ ಮಾಡಿಕೊಡಲಾಗಿದೆ. ಎಲ್ಲಾ ಕಂಪನಿಗಳ ಹೊಸ ಸಂಗ್ರಹಗಳು, ತಾಜಾ ಪಾನೀಯಗಳು ಮತ್ತು ಸವಿದು ಆಯ್ಕೆಮಾಡಿಕೊಳ್ಳುವ ವ್ಯವಸ್ಥೆ ಗ್ರಾಹಕರನ್ನು ಆಕರ್ಷಿಸಲಿದೆ.