_1783579302458.webp?w=480&auto=format%2Ccompress&fit=max)
_1783579302458.webp?w=480&auto=format%2Ccompress&fit=max)
ಕಾಸರಗೋಡು: ಗೃಹಿಣಿಗೆ ಮಾದಕ ವಸ್ತು ನೀಡಿ ಲೈಂಗಿಕ ದೌರ್ಜನ್ಯ ಎಸಗಿರುವ ಪ್ರಕರಣಕ್ಕೆ ಸಂಬಂಧಿಸಿ ಹೊಸದುರ್ಗ ಠಾಣೆ ಪೊಲೀಸರು ಮೂವರ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಕಡಪ್ಪುರ ನಿವಾಸಿ ರಾಹುಲ್, ರಾಜನ್ ಹಾಗೂ ಆತನ ಪತ್ನಿ ಮಿನಿ ವಿರುದ್ಧ ಕೇಸು ದಾಖಲಾಗಿದೆ. ಆವಿಕ್ಕರದಲ್ಲಿ ರಾಜನ್ ಮತ್ತು ಆತನ ಪತ್ನಿ ವಾಸಿಸುತ್ತಿದ್ದ ಕ್ವಾರ್ಟರ್ಸ್‌ನಲ್ಲಿ ಸಂತ್ರಸ್ತೆ ಗೃಹಿಣಿಗೆ ದೌರ್ಜನ್ಯ ಎಸಗಲಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ರಾಜನ್ ಗೃಹಿಣಿಯನ್ನು ರಾಹುಲ್‌ಗೆ ಪರಿಚಯಿಸಿದ್ದು, ಬಳಿಕ ಆಕೆಯ ಮೊಬೈಲ್ ಸಂಖ್ಯೆ ಪಡೆದುಕೊಂಡಿದ್ದಾನೆ. ನಂತರ ಸಂತ್ರಸ್ತೆಯನ್ನು ರಾಜನ್‌ನ ಮನೆಗೆ ಕರೆಸಿಕೊಂಡು, ರಾಜನ್ ಪತ್ನಿಯ ಸಹಾಯದಿಂದ ರಾಹುಲ್ ದೌರ್ಜನ್ಯ ಎಸಗಿದ್ದಾನೆ. ಅಲ್ಲದೆ ದೌರ್ಜನ್ಯದ ದೃಶ್ಯಗಳನ್ನು ಚಿತ್ರೀಕರಿಸಿಕೊಂಡಿದ್ದು, 1 ಲಕ್ಷ ರೂ. ನೀಡಬೇಕು ಇಲ್ಲವಾದರೆ ಜಾಲತಾಣದಲ್ಲಿ ಪೋಸ್ಟ್ ಮಾಡುವುದಾಗಿ ಆರೋಪಿಗಳು ಬ್ಲಾೃಕ್‌ಮೇಲ್ ಮಾಡಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.