ಆವರಣಗೋಡೆಯಿಲ್ಲದ ಬಾವಿಗೆ ಬಿದ್ದು ಗೃಹಿಣಿ ಮೃತ್ಯು

Death
Death
Published on

ಕಾಸರಗೋಡು: ಕಾರಡ್ಕ ನಿವಾಸಿಯಾಗಿರುವ ಗೃಹಿಣಿಯೊಬ್ಬರ ಮೃತದೇಹ ಆವರಣಗೋಡೆಯಲ್ಲದ ಬಾವಿಯಲ್ಲಿ ಪತ್ತೆಯಾಗಿದೆ. ಮಡಿಕ್ಕೆ ಚಾಳಕಡವ್ ಆಯುರ್ವೇದ ಆಸ್ಪತ್ರೆ ಸಮೀಪದ ನಿವಾಸಿ ಆಟೋ ಚಾಲಕ ಸುರೇಂದ್ರನ್ ಎಂಬುವರ ಪತ್ನಿ ಸರಳಾ(46) ಮೃತಪಟ್ಟವರು.

ಬಾವಿಯ ಒಂದು ಭಾಗ ಕುಸಿದ ಸ್ಥಿತಿಯಲ್ಲಿದ್ದು, ತೋಟದ ಬಳಿ ಇರುವ ಬಾವಿಯ ಪರಿಸರದಲ್ಲಿ ಚಪ್ಪಲಿ ಕಂಡ ಹಿನ್ನೆಲೆಯಲ್ಲಿ ನಡೆಸಿದ ಹುಡುಕಾಟದ ಮಧ್ಯೆ ಗೃಹಿಣಿ ಬಾವಿಯಲ್ಲಿ ಬಿದ್ದಿರುವುದು ಕಂಡು ಬಂದಿದೆ. ಅಗ್ನಿಶಾಮಕದಳ ಮತ್ತು ಪೊಲೀಸರು ಸ್ಥಳಕ್ಕಾಗಮಿಸಿ ಮೇಲಕ್ಕೆತ್ತಿ ಆಸ್ಪತ್ರೆಗೆ ದಾಖಲಿಸಿದರೂ ಪ್ರಯೋಜನವಾಗಿರಲಿಲ್ಲ. ಆಯತಪ್ಪಿ ಬಿದ್ದಿರಬೇಕೆಂದು ಸಂಶಯಿಸಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net