ಕಂಬಳದ ಅಬ್ಬರದಲ್ಲಿ ಮರೆಯಾದ ಆಸ್ಪತ್ರೆ ಬೇಡಿಕೆ

ರಾಜ್ಯ ಸರ್ಕಾರಕ್ಕೆ ಕಂಬಳದ ಕೋಣಗಳ ಕುರಿತು ಇರುವ ಕಾಳಜಿ ಜಿಲ್ಲೆಯ ಜಸಾಮಾನ್ಯರ ಬಗ್ಗೆ ಇಲ್ಲ.
ಪ್ರತಿಭಟನಾ ಸಭೆಯಲ್ಲಿ ಮುನೀರ್ ಕಾಟಿಪಳ್ಳ ಮಾತನಾಡಿದರು. ಹೋರಾಟ ಸಮಿತಿ ಸಂಚಾಲಕ ಸದಾಶಿವದಾಸ್, ಪ್ರಮುಖರಾದ ಹೊನ್ನಯ್ಯ ಅಮೀನ್ ವಾಮಂಜೂರು, ಬಾಬು ಸಾಲ್ಯಾನ್ ತಿರುವೈಲು, ಅಶೋಕ್ ವಾಮಂಜೂರು, ಆನಂದ ಪೂಜಾರಿ ಇರುವೈಲು, ಯಶೋದಾ ಮಳಲಿ ಇದ್ದರು.
ಪ್ರತಿಭಟನಾ ಸಭೆಯಲ್ಲಿ ಮುನೀರ್ ಕಾಟಿಪಳ್ಳ ಮಾತನಾಡಿದರು. ಹೋರಾಟ ಸಮಿತಿ ಸಂಚಾಲಕ ಸದಾಶಿವದಾಸ್, ಪ್ರಮುಖರಾದ ಹೊನ್ನಯ್ಯ ಅಮೀನ್ ವಾಮಂಜೂರು, ಬಾಬು ಸಾಲ್ಯಾನ್ ತಿರುವೈಲು, ಅಶೋಕ್ ವಾಮಂಜೂರು, ಆನಂದ ಪೂಜಾರಿ ಇರುವೈಲು, ಯಶೋದಾ ಮಳಲಿ ಇದ್ದರು.
Published on: 

ಗುರುಪುರ: ರಾಜ್ಯ ಸರ್ಕಾರಕ್ಕೆ ಕಂಬಳದ ಕೋಣಗಳ ಕುರಿತು ಇರುವ ಕಾಳಜಿ ಜಿಲ್ಲೆಯ ಜಸಾಮಾನ್ಯರ ಬಗ್ಗೆ ಇಲ್ಲ. ಮೈಸೂರು ದಸರಾದಲ್ಲಿ ಕಂಬಳ ಮಾಡಿ ರಾಜ್ಯದ ಜನರನ್ನು ಮರುಳು ಮಾಡಲು ಸರ್ಕಾರ ಮುಂದಾಗಿದೆ. ಜನರ ಆರೋಗ್ಯ ಕಾಪಾಡುವ ದೃಷ್ಟಿಯಿಂದ ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ, ನಿಮ್ಹಾನ್ಸ್ ಆಸ್ಪತ್ರೆಗಳ ಘಟಕ ಸ್ಥಾಪಿಸಬೇಕೆಂಬ ಬೇಡಿಕೆಗಳು ಕಂಬಳದ ಅಬ್ಬರದಲ್ಲಿ ಮರೆಯಾಗುತ್ತಿವೆ ಎಂದು ಸಿಪಿಎಂ ಜಿಲ್ಲಾ ಕಾರ್ಯದರ್ಶಿ ಮುನೀರ್ ಕಾಟಿಪಳ್ಳ ಟೀಕಿಸಿದರು.

ಗುರುಪುರ ಹೋಬಳಿಗೆ ಸಮುದಾಯ ಆಸ್ಪತ್ರೆ, ಮಂಗಳೂರಿನಲ್ಲಿ ಕಿದ್ವಾಯಿ, ಜಯದೇವ, ನಿಮ್ಹಾನ್ಸ್ ಆಸ್ಪತ್ರೆಗಳ ಘಟಕ ಸ್ಥಾಪಿಸಬೇಕು ಹಾಗೂ ಸರ್ಕಾರಿ ಆಸ್ಪತ್ರೆಗಳ ಬಲವರ್ಧನೆ ಸಹಿತ ಹಲವು ಬೇಡಿಕೆ ಮುಂದಿಟ್ಟು ‘ಸರ್ಕಾರಿ ಆಸ್ಪತ್ರೆ ಉಳಿಸಿ ಹೋರಾಟ ಸಮಿತಿ’ ಸೋಮವಾರ ಗಂಜಿವಠ ಜಂಕ್ಷನ್‌ನಲ್ಲಿ ಬೃಹತ್ ಪ್ರತಿಭಟನಾ ಸಭೆಯಲ್ಲಿ ಮಾತನಾಡಿದರು.

ಹೋರಾಟ ಸಮಿತಿ ಸಂಚಾಲಕ ಸದಾಶಿವದಾಸ್, ವಿವಿಧ ಸಂಘಟನೆಗಳ ಪ್ರಮುಖರಾದ ಹೊನ್ನಯ್ಯ ಅಮೀನ್ ವಾಮಂಜೂರು, ಬಾಬು ಸಾಲ್ಯಾನ್ ತಿರುವೈಲು, ಅಶೋಕ್ ವಾಮಂಜೂರು, ಆನಂದ ಪೂಜಾರಿ ಇರುವೈಲು, ಯಶೋದಾ ಮಳಲಿ, ಸಾಮಾಜಿಕ ಕಾರ್ಯಕರ್ತ ಬಾವಾ ಪದ್ರೆಂಗಿ, ಶೀನ ನಾಯ್ಕ, ರವೀಂದ್ರ ಶೆಟ್ಟಿಗಾರ ಮುಚ್ಚೂರು, ಜನಾರ್ದನ ಗೌಡ ಎಡಪದವು, ದಿನೇಶ್ ಇರುವೈಲು, ರಾಜೇಶ್ ನಾಯ್ಕ, ಭೋಜ ಇರುವೈಲು, ಗೋಪಾಲ ಮೂಲ್ಯ, ವಾರಿಜಾ ಕುಪ್ಪೆಪದವು, ಕುಸುಮಾ ಕುಪ್ಪೆಪದವು ಮತ್ತಿತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net