

ಬಂಟ್ವಾಳ: ಕಿರಿಯ ವಯಸ್ಸಿನಲ್ಲೇ ಮಾನವೀಯ ಮೌಲ್ಯಗಳ ಜತೆ ಸೇವೆಯಲ್ಲೇ ಸಂತೃಪ್ತಿ ಕಾಣುವ ಸೇವಾಮನೋಭಾವದ ಬದುಕು ಎಲ್ಲರಿಗೂ ಪ್ರೇರಣೆ ಎಂದು ಪತ್ರಕರ್ತ ವಾಲ್ಟರ್ ನಂದಳಿಕೆ ಅಭಿಪ್ರಾಯಪಟ್ಟರು.
ಹುಟ್ಟೂರ ಅಭಿನಂದನಾ ಸಮಿತಿ ವತಿಯಿಂದ ಸೇವಾ ಸಂಸ್ಥೆಗಳ ಸಹಕಾರದೊಂದಿಗೆ ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಅರ್ಜುನ್ ಭಂಡಾರ್ಕರ್ ಅವರಿಗೆ ಬಂಟ್ವಾಳದಲ್ಲಿ ಆಯೋಜಿಸಿದ್ದ ಹುಟ್ಟೂರ ಸನ್ಮಾನ ಕಾರ್ಯಕ್ರಮದಲ್ಲಿ ಮಾತನಾಡಿದರು.
ಉದ್ಯಮಿ ಭುವನೇಶ್ ಪಚಿನಡ್ಕ ಕಾರ್ಯಕ್ರಮ ಉದ್ಘಾಟಿಸಿದರು. ಅಶಕ್ತರಾದ ನಾಲ್ಕು ಕುಟುಂಬಗಳಿಗೆ ಆರೋಗ್ಯ ನಿಧಿ ವಿತರಿಸಲಾಯಿತು. ಬಳಿಕ ಸರ್ಕಾರಿ ವಸತಿ ಶಾಲೆಗೆ ಕಂಪ್ಯೂಟರ್ ಕೊಡುಗೆ ನೀಡಲಾಯಿತು.
ಉದ್ಯಮಿ ನಾಗೇಂದ್ರ ವಿ. ಬಾಳಿಗ ಅಧ್ಯಕ್ಷತೆ ವಹಿಸಿದ್ದರು. ಪ್ರಕಾಶ್ ಅಂಚನ್, ಬಂಟ್ವಾಳ ಬಿಜೆಪಿ ಪ್ರಧಾನ ಕಾರ್ಯದರ್ಶಿ ಸುದರ್ಶನ್ ಬಜ, ಎನ್. ಲಕ್ಷ್ಮೀನಾರಾಯಣ ಮಲ್ಯ, ಫಯಾಝ್ ಮಾಡೂರು, ಸಂಗೀತಾ ಆರ್ ನಾಯಕ್, ಭಾಗ್ಯಶ್ರೀ ಅರ್ಜುನ್ ಭಂಡಾರ್ಕರ್ ಉಪಸ್ಥಿತರಿದ್ದರು. ಗಿರೀಶ್ ಪೈ ಸ್ವಾಗತಿಸಿದರು. ಸಚಿನ್ ಸುವರ್ಣ ಪ್ರಸ್ತಾವನೆಗೈದರು. ಕುಸುಮಾಕರ್ ಕುಂಪಲ ಅಭಿನಂದನಾ ಪತ್ರ ವಾಚಿಸಿದರು. ಅಜಿತ್‌ಕುಮಾರ್ ವಂದಿಸಿದರು. ದಿನೇಶ್ ಸುವರ್ಣ ರಾಯಿ ಕಾರ್ಯಕ್ರಮ ನಿರೂಪಿಸಿದರು.