2019ರ ನ.27ರಂದು ಮಧ್ಯಾಹ್ನ 11.50ರ ವೇಳೆಗೆ ಸ್ಕೂಟರ್ ಸವಾರೆ ಪ್ರಿಯಾ ವೈ. ಸುವರ್ಣ (42) ಅವರು ಕೆಪಿಟಿಯಿಂದ ಕೊಟ್ಟಾರ ಚೌಕಿ ಕಡೆಗೆ ಸ್ಕೂಟರ್ ಚಲಾಯಿಸಿಕೊಂಡು ಹೋಗುತ್ತಿದ್ದಾಗ ಕುಂಟಿಕಾನ ಬಿಎಂಎಸ್ ಹೊಟೇಲ್ ಎದುರುಗಡೆ ಲಾರಿ ಚಾಲಕ ಎಂ.ಡಿ. ಸತೀಶ್ ಲಾರಿಯನ್ನು ದ್ವಿಚಕ್ರ ವಾಹನದ ಹಿಂಭಾಗಕ್ಕೆ ಢಿಕ್ಕಿ ಹೊಡೆಸಿದ್ದಾನೆ. ಪರಿಣಾಮ ಸ್ಕೂಟರ್ ಸವಾರೆ ದ್ವಿಚಕ್ರ ವಾಹನ ಸಮೇತ ರಸ್ತೆಗೆ ಬಿದ್ದು, ತಲೆಗೆ ಗಂಭೀರ ರೀತಿಯ ಗಾಯವಾಗಿತ್ತು. ಚಿಕಿತ್ಸೆಗಾಗಿ ಖಾಸಗಿ ದಾಖಲಿಸಲ್ಪಟ್ಟವರು ಚಿಕಿತ್ಸೆ ಫಲಕಾರಿಯಾಗದೇ ಆದೇ ದಿನ ಮೃತಪಟ್ಟಿದ್ದರು. ಪಶ್ಚಿಮ ಸಂಚಾರ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿತ್ತು. ಆಗಿನ ಪೊಲೀಸ್ ನಿರೀಕ್ಷಕರಾದ ಅಮಾನುಲ್ಲಾ ಅವರು ತನಿಖೆ ನಡೆಸಿ, ನ್ಯಾಯಾಲಯಕ್ಕೆ ದೋಷಾರೋಪಣ ಪಟ್ಟಿಸಲ್ಲಿಸಿದ್ದರು.