ಕ್ಷೇತ್ರದ ಮೇಳ ವಿವರ ದಾಖಲೀಕರಣ ಶ್ರೇಷ್ಠ ಕಾರ್ಯ : ಡಾ.ನಿರಂಜನ ವಾನಳ್ಳಿ ಮೆಚ್ಚುಗೆ

ಕಟೀಲು ದೇವಳದ ಕುದ್ರುವಿನಲ್ಲಿ ಕಟೀಲು ಮೇಳ ಮತ್ತು ಇತಿಹಾಸ ಪ್ರಜ್ಞೆ ಕಾರ್ಯಕ್ರಮ ಸೋಮವಾರ ನಡೆಯಿತು.
ಕಟೀಲು ದೇವಳದ ಕುದ್ರುವಿನಲ್ಲಿ ಕಟೀಲು ಮೇಳ ಮತ್ತು ಇತಿಹಾಸ ಪ್ರಜ್ಞೆ ಕಾರ್ಯಕ್ರಮ ಸೋಮವಾರ ನಡೆಯಿತು.
Published on

ಕಟೀಲು: ಇಲ್ಲಿನ ಯಕ್ಷಗಾನ ಮೇಳ ಹೇಗಿತ್ತು ಎಂಬುದನ್ನು ಯುವ ಪೀಳಿಗೆ ತಿಳಿದುಕೊಳ್ಳಬೇಕಾದರೆ ಪ್ರತಿಯೊಂದು ದಾಖಲೀಕರಣಗೊಳಿಸುವುದು ಅತ್ಯಗತ್ಯ. ಅಂತಹ ಕಾರ್ಯ ಮಾಡುತ್ತಿರುವ ಆಡಳಿತ ಮಂಡಳಿಯನ್ನು ಅಭಿನಂದಿಸಬೇಕು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಉಪಕುಲಪತಿ ಡಾ.ನಿರಂಜನ ವಾನಳ್ಳಿ ಶ್ಲಾಘಿಸಿದರು.

ಕಟೀಲು ದೇವಳದ ಕುದ್ರುವಿನಲ್ಲಿ ಸೋಮವಾರ ನಡೆದ ಕಟೀಲು ಮೇಳ ಮತ್ತು ಇತಿಹಾಸ ಪ್ರಜ್ಞೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಬಹಳ ಸಾಧಕರು, ಪರಂಪರೆಯ ವಿವರ ದಾಖಲೀಕರಣಗೊಳ್ಳದೆ ಇದ್ದುದ್ದರಿಂದ ಇಂದು ಮಾಹಿತಿ ಕೊರತೆ ಇದೆ. ನಾಲ್ಕುನೂರು ವರ್ಷಗಳ ಇತಿಹಾಸ ಇದೆ ಎಂದು ಉಲ್ಲೇಖಿಸುವುದಷ್ಟೇ ಹೊರತು ಪೂರಕ ದಾಖಲೆ ಲಭ್ಯವಿಲ್ಲ. ಜತೆಗೆ ಹಲವು ದಾಖಲೆಗಳೂ ನಾಶವಾಗಿವೆ. ಯಾವುದೇ ವಿಚಾರವಾದರೂ ದಾಖಲೀಕರಣ ಅಗತ್ಯ. ಈ ನಿಟ್ಟಿನಲ್ಲಿ ಕಾರ್ಯೋನ್ಮುಖರಾಗಿರುವವರು ಅಭಿನಂದನೆಗೆ ಅರ್ಹರು ಎಂದರು.

ಕಟೀಲು ದೇವಳದ ಮೊಕ್ತೇಸರ ವಾಸುದೇವ ಆಸ್ರಣ್ಣ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಕಲಾರಂಗದ ಅಧ್ಯಕ್ಷ ಗಂಗಾಧರ ರಾವ್, ವಿದ್ವಾಂಸರಾದ ಪ್ರಭಾಕರ ಜೋಷಿ, ಕಾವೂರು ಬಾಬು ಶೆಟ್ಟಿ ಮತ್ತಿತರರು ಉಪಸ್ಥಿತರಿದ್ದರು. ಪ್ರಧಾನ ಅರ್ಚಕ ಹರಿನಾರಾಯಣ ದಾಸ ಆಸ್ರಣ್ಣ ಸ್ವಾಗತಿಸಿದರು. ಶ್ರುತಕೀರ್ತಿ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net