ವಿದೇಶದ ವಿಕೃತಿಯಲ್ಲಿ ಮೆರೆಯುತ್ತಿರುವ ಜನ : ಸುಭಾಶ್ಚಂದ್ರ ಕಲಂಜ

ಕೆಮ್ರಾಲ್ ಮಂಡಲದ ಹಿಂದೂ ಸಂಗಮ ನಡೆಯಿತು. ಸುಭಾಶ್ಚಂದ್ರ ಕಲಂಜ, ವಿಶ್ವೇಶ್ವರ ಭಟ್, ಅಶೋಕ್ ಶೆಣೈ, ಸುಮತಿ ಭಟ್ ಹೊಸಕಾಡು ಮೊದಲಾದವರಿದ್ದರು.
ಕೆಮ್ರಾಲ್ ಮಂಡಲದ ಹಿಂದೂ ಸಂಗಮ ನಡೆಯಿತು. ಸುಭಾಶ್ಚಂದ್ರ ಕಲಂಜ, ವಿಶ್ವೇಶ್ವರ ಭಟ್, ಅಶೋಕ್ ಶೆಣೈ, ಸುಮತಿ ಭಟ್ ಹೊಸಕಾಡು ಮೊದಲಾದವರಿದ್ದರು.
Published on
ಹಿಂದೂ ಸಂಗಮವೆಂಬುವುದು ಹಿಂದುಗಳ ಶಕ್ತಿ ಪ್ರದರ್ಶನವಲ್ಲ. ಹಿಂದೂ ಸಂಗಮದ ಮೂಲಕ ಹಿಂದುಗಳ ದರ್ಶನವಾಗಬೇಕಿದೆ. ಭಾರತ ಜಗದ್ಗುರು ಆಗಬೇಕು ಎನ್ನುವ ದೃಷ್ಟಿಯಲ್ಲಿ ಅನೇಕ ವರ್ಷಗಳ ಕೆಲಸ ನಡೆಯುತ್ತಿದೆ. ನಾವು ದೀರ್ಘ ಕಾಲದ ಆಲಸ್ಯದಿಂದ ಇನ್ನೂ ಮುಂದುವರಿದಿಲ್ಲ. ನಮ್ಮ ಸಂಸ್ಕೃತಿ ಮರೆತು ವಿದೇಶದ ವಿಕೃತಿಯಲ್ಲಿ ಮೆರೆಯುತ್ತಿದ್ದೇವೆ. ಹಿಂದೂ ಸಮಾಜ ಪರಿವರ್ತನೆಗೆ ಮಾದರಿ. ಸಾಮಾಜಿಕ ಸಾಮರಸ್ಯ ನಮ್ಮಲ್ಲಿರಲಿ. ಕುಟುಂಬ ವ್ಯವಸ್ಥೆಯಲ್ಲಿ ಸಂಸ್ಕೃತಿ, ಸಂಸ್ಕಾರ ನಡೆಯಬೇಕು ಎಂದು ಆರ್.ಎಸ್.ಎಸ್.ನ ವಿಭಾಗ ಸಹವಾಹಕ ಸುಭಾಶ್ಚಂದ್ರ ಕಲಂಜ ಹೇಳಿದರು.
ಹಿಂದೂ ಸಂಗಮ ಆಯೋಜನಾ ಸಮಿತಿಯ ಮೂಲ್ಕಿ ತಾಲೂಕು ಕೆಮ್ರಾಲ್, ಅತ್ತೂರು, ಪಂಜ, ಕೊಯಿಕುಡೆ ಗ್ರಾಮಗಳನ್ನೊಳಗೊಂಡ ಕೆಮ್ರಾಲ್ ಮಂಡಲದ ಹಿಂದೂ ಸಂಗಮ ಕಾರ್ಯಕ್ರಮದಲ್ಲಿ ಮಾತನಾಡಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net