ದೈರ್ಯ, ಶೌರ್ಯದ ಇತಿಹಾಸವಿರುವ ಸಮಾಜ: ಶಿವಾನಂದ ಮೆಂಡನ್‌

ಅಡ್ಯಾರಿನಲ್ಲಿ ಹಿಂದೂ ಸಂಗಮ ಯೋಜಿಸಲಾಯಿತು. ಶಿವಾನಂದ ಮೆಂಡನ್, ಪುರುಷೋತ್ತಮ ಭಂಡಾರಿ ಮೊದಲಾದವರಿದ್ದರು.
ಅಡ್ಯಾರಿನಲ್ಲಿ ಹಿಂದೂ ಸಂಗಮ ಯೋಜಿಸಲಾಯಿತು. ಶಿವಾನಂದ ಮೆಂಡನ್, ಪುರುಷೋತ್ತಮ ಭಂಡಾರಿ ಮೊದಲಾದವರಿದ್ದರು.
Published on
ಬೃಹತ್ ಹಿಂದೂ ಸಂಗಮ ಕಾರ್ಯಕ್ರಮಕ್ಕಿಂತ ಮುಂಚೆ ಅಡ್ಯಾರು ಕಟ್ಟೆಯಿಂದ ದೇವಸ್ಥಾನದವರೆಗೆ ಚೆಂಡೆ, ಕುಣಿತ ಭಜನೆ ಹಾಗೂ ಹುಲಿ ಕುಣಿತದೊಂದಿಗೆ ಭವ್ಯ ಶೋಭಾಯಾತ್ರೆ ನಡೆಯಿತು.
ವಿಹಿಂಪ ಮಂಗಳೂರು ವಿಭಾಗ ಸಹಕಾರ್ಯದರ್ಶಿ ಶಿವಾನಂದ ಮೆಂಡನ್ ಮಾತನಾಡಿ, ಹಿಂದೂಗಳದ್ದು ಸೋತ ಇತಿಹಾಸವಲ್ಲ. ಹಿಂದೂ ಸಮಾಜ ಧೈರ್ಯ-ಶೌರ್ಯದ ಇತಿಹಾಸ ಹೊಂದಿದೆ ಎಂದರು.
ಮಹಾನಗರ ಸಂಸ್ಕಾರ ಭಾರತಿ ಅಧ್ಯಕ್ಷ ಪುರುಷೋತ್ತಮ ಭಂಡಾರಿ, ಹಿಂದೂ ಸಂಗಮ ಆಯೋಜನಾ ಸಮಿತಿ ಅಧ್ಯಕ್ಷ ವಿವೇಕ್ ಕೋಟ್ಯಾನ್, ಶ್ರೀನಿವಾಸ ವಿವಿ ಉಪನ್ಯಾಸಕಿ ರೇವತಿ, ವೀರಾಂಜನೇಯ ಸ್ವಾಮಿ ದೇವಸ್ಥಾನದ ಅಧ್ಯಕ್ಷ ರಮೇಶ್ ತುಂಬೆ ಉಪಸ್ಥಿತರಿದ್ದರು. ಕಲಾರತ್ನ ಶಂ.ನಾ.ಅಡಿಗ ಅವರಿಂದ ‘ಎದ್ದೇಳು ಕಲಿ ಹನುಮ’ ಹರಿಕಥಾ ಸತ್ಸಂಗ ಜರುಗಿತು. ವಿಶ್ವಂಭರ ರೈ ಸ್ವಾಗತಿಸಿದರು. ದೀಪಕ್ ಅಡ್ಯಾರು ನಿರೂಪಿಸಿದರು. ಮಹಾಬಲ ಅಡ್ಯಾರು ವಂದಿಸಿದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net