

ಹೆದ್ದಾರಿ ಕಾಮಗಾರಿ ಹಿನ್ನೆಲೆ ಬಹುಗ್ರಾಮ ಯೋಜನೆಯ ಪೈಪ್ ಒಡೆದು ನೀರಿನ ಪೂರೈಕೆ ಅಸಾಧ್ಯವಾಗಿದ್ದು, ದುರಸ್ತಿ ನಿಟ್ಟಿನಲ್ಲಿ ಈಗಾಗಲೇ ಎನ್‌ಎಚ್‌ಎಐ ಬಳಿ ಮಾತುಕತೆ ನಡೆಸಲಾಗಿದ್ದು, ಇಲಾಖೆ ವತಿಯಿಂದ ನೋಟಿಸ್ ಕೂಡ ಕಳುಹಿಸಲಾಗಿದೆ. ಅವರೇ ದುರಸ್ತಿ ಕಾರ್ಯ ನಿರ್ವಹಿಸಬೇಕಿದ್ದು, ಪೈಪ್‌ಗೆ ಆರ್ಡರ್ ಕೊಟ್ಟಿರುವುದಾಗಿ ಮಾಹಿತಿ ನೀಡಿದ್ದಾರೆ. ಒಂದೆರಡು ದಿನಗಳಲ್ಲಿ ಪೈಪ್ ದುರಸ್ತಿ ಭರವಸೆ ನೀಡಿದ್ದಾರೆ.
ಹೆದ್ದಾರಿ ಕಾಮಗಾರಿ ವೇಳೆ ಕುಡಿಯುವ ನೀರಿನ ಪೈಪ್‌ಲೈನ್ ಒಡೆದಿರುವುದರಿಂದ ಗ್ರಾಮದ ಒಂದು ಭಾಗದಲ್ಲಿ ನೀರಿನ ಸಮಸ್ಯೆ ಎದುರಾಗಿದ್ದು, ಅದು ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಪೈಪ್‌ಲೈನ್ ಆದ ಕಾರಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆ ನಿರ್ವಹಬೇಕಿದೆ. ಈಗಾಗಲೇ ಅವರು ಹೆದ್ದಾರಿಗೆ ಸಂಬಂಧಿಸಿದ ಅಧಿಕಾರಿಗಳ ಜತೆಗೆ ಮಾತುಕತೆಯನ್ನೂ ಮಾಡಿದ್ದಾರೆ.