ಹೆದ್ದಾರಿಯಂಚಲ್ಲಿ ನೆಡುತೋಪು! : ಅರಣ್ಯ ಇಲಾಖೆಯಿಂದ ಅವೈಜ್ಞಾನಿಕ ಕಾರ್ಯ

ರಾಜ್ಯ ಹೆದ್ದಾರಿ ಅಂಚಿನಲ್ಲಿ ಅರಣ್ಯ ಇಲಾಖೆಯಿಂದ ನಡುತೋಪು ರಚನೆಗಾಗಿ ಗುಂಡಿ ತೋಡಿರುವುದು.
ರಾಜ್ಯ ಹೆದ್ದಾರಿ ಅಂಚಿನಲ್ಲಿ ಅರಣ್ಯ ಇಲಾಖೆಯಿಂದ ನಡುತೋಪು ರಚನೆಗಾಗಿ ಗುಂಡಿ ತೋಡಿರುವುದು.
Published on

1 ಕಿ.ಮೀ. 300 ಗಿಡ

ಇದೇ ರಸ್ತೆಯ ಇನ್ನೊಂದು ಬದಿಯಲ್ಲಿ 100 ವರ್ಷಗಳ ಹಿಂದೆ ರಸ್ತೆಯಿಂದ 6 ಮೀಟರ್ ದೂರದಲ್ಲಿ ನೆಟ್ಟಿರುವ ಹಲಸು, ಮಾವು ಮರಗಳು ಇದೀಗ ಹೆಮ್ಮರವಾಗಿ ನಿಂತಿವೆ. ಇದೀಗ ರಸ್ತೆಯಿಂದ ಕೇವಲ 1 ಅಡಿ ದೂರದಲ್ಲಿ ಅವೈಜ್ಞಾನಿಕವಾಗಿ ಮರಗಳನ್ನು ಬೆಳೆಸುವುದು ಎಷ್ಟು ಸರಿ? ಇಲ್ಲಿ 2 ವಾಹನ ಮುಖಾಮುಖಿಯಾದರೆ ರಸ್ತೆ ಬದಿಯಲ್ಲಿ ಜಾಗವಿಲ್ಲದೆ ಅಪಘಾತಗಳಿಗೆ ಕಾರಣವಾಗುವ ಸಾಧ್ಯತೆ ಇದ್ದು, ಇದನ್ನು ತಕ್ಷಣದಿಂದ ನಿಲ್ಲಿಸಬೇಕು. ಬದಲಾಗಿ ಚರಂಡಿಯ ಹೊರಗಡೆಯಿಂದ ನೆಡುವಂತಾಗಬೇಕು.

ಈ ಹಿಂದೆ ಸವಣೂರು ಭಾಗದಲ್ಲಿ ಇದೇ ರೀತಿ ರಸ್ತೆ ಬದಿಯಲ್ಲಿ ಗುಂಡಿ ತೆಗೆದಿದ್ದರು. ಕಡಬ ಕೆಡಿಪಿ ಸಭೆಯಲ್ಲಿ ಚರ್ಚೆಯಾಗಿ ಸುಳ್ಯ ಶಾಸಕರು ರಸ್ತೆ ಬದಿಯಲ್ಲಿ ಗಿಡ ನೆಡದಂತೆ ಸೂಚನೆ ನೀಡಿದ್ದರು. ಇದೀಗ ಕೊಲದಲ್ಲಿಯೂ ಇದೇ ರೀತಿಯಾಗಿ ನೆಡುತೋಪು ರಚನೆಗೆ ಗುಂಡಿ ತೋಡುತ್ತಿದ್ದಾರೆ. ರಸ್ತೆ ವಿಸ್ತರಿಸುವಾಗ, ಚರಂಡಿ ಕಾಮಗಾರಿ ನಡೆಸುವಾಗ ಗಿಡಗಳಿಗೆ ಹಾನಿ ಉಂಟಾಗುವ ಸಾಧ್ಯತೆ ಇದೆ. ಇದಕ್ಕೆ ನಾವು ಜವಾಬ್ದಾರರಲ್ಲ ಎಂದು ತಿಳಿಸಿ ಗುಂಡಿ ತೆಗೆಯದಂತೆ ಸೂಚಿಸಿ, ಅರಣ್ಯ ಇಲಾಖೆಯವರಿಗೆ ನೋಟಿಸ್ ನೀಡಲಾಗಿದೆ.

ಈ ಬಗೆಗಿನ ದೂರು ಹಿನ್ನೆಲೆಯಲ್ಲಿ ಸ್ಥಳ ಪರಿಶೀಲನೆ ನಡೆಸಿದ್ದು, ಕಾಮಗಾರಿ ನಡೆಸದಂತೆ ಸೂಚನೆ ನೀಡಲಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net