ಮಂಗಳೂರು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಗಣತಿ ಕಾರ್ಯ ಶೇ. 100ರಷ್ಟು ಪೂರ್ಣ

ಸಂದರ್ಭಿಕ ಚಿತ್ರ
ಸಂದರ್ಭಿಕ ಚಿತ್ರ
Published on

ಪ್ರಮುಖ ಮುಖ್ಯಾಂಶಗಳು

  • ನಗರ ಭಾಗದಲ್ಲಿ ಗಣತಿ ಕಾರ್ಯ ಬಾಕಿ
  • ತಾಲೂಕುಗಳಲ್ಲಿ 23 ಹಾಗೂ ಪಾಲಿಕೆಯಲ್ಲಿ 12 ಸೇರಿದಂತೆ ಒಟ್ಟು 35 ಚಾರ್ಜ್ ಅಧಿಕಾರಿಗಳ ನೇಮಕ
  • ಬಾಕಿ ಇರುವ ಶೇ. 15ರಷ್ಟು ಕಾರ್ಯವನ್ನು ಮುಂದಿನ ಮೂರು ದಿನಗಳಲ್ಲಿ ಮುಗಿಸಲು ಗಡುವು
  • ನಗರ ವ್ಯಾಪ್ತಿಯಲ್ಲಿ ಗಣತಿ ಕಾರ್ಯ ಇನ್ನೂ ಪ್ರಗತಿಯಲ್ಲಿದ್ದು, ಸದ್ಯ ಶೇ. 84.9ರಷ್ಟು (875ರಲ್ಲಿ 743 ಬ್ಲಾಕ್‌ಗಳು) ಕಾರ್ಯ ಮುಗಿದಿದೆ.
ಮಂಗಳೂರು: ಕರಾವಳಿಯಲ್ಲಿ ಬಿರು ಬಿಸಿಲಿನ ಅಬ್ಬರವಿದ್ದರೂ ಮಂಗಳೂರು ತಾಲೂಕು ಪಂಚಾಯಿತಿ ವ್ಯಾಪ್ತಿಯಲ್ಲಿ ಮನೆಗಣತಿ ಪ್ರಕ್ರಿಯೆ ಶೇ.100ರಷ್ಟು ಪೂರ್ಣಗೊಂಡಿದೆ. ವಿಶೇಷವೆಂದರೆ, ಹದಿನೈದು ವರ್ಷಗಳ ನಂತರ ನಡೆಯುತ್ತಿರುವ ಈ ಬೃಹತ್ ಗಣತಿಯಲ್ಲಿ ಸರ್ಕಾರಿ ದಾಖಲೆಗಳಲ್ಲಿದ್ದ ಪ್ರಮಾಣಕ್ಕಿಂತಲೂ ಹೆಚ್ಚಿನ ಸಂಖ್ಯೆಯ ಮನೆಗಳು ಪತ್ತೆಯಾಗಿರುವುದು ಬೆಳಕಿಗೆ ಬಂದಿದೆ.
ಏಪ್ರಿಲ್ 16ರಿಂದ ಪ್ರಾರಂಭವಾದ ಮನೆಪಟ್ಟಿ ಹಾಗೂ ಮನೆಗಣತಿ ಕಾರ್ಯ ಗ್ರಾಮಾಂತರ ಭಾಗದಲ್ಲಿ ವೇಗವಾಗಿ ನಡೆದಿದೆ. ಮಂಗಳೂರು ತಾಲೂಕು ಪಂಚಾಯಿತಿ ವ್ಯಾಪ್ತಿಯ 236 ಹೌಸ್ ಲಿಸ್ಟಿಂಗ್ ಬ್ಲಾಕ್‌ಗಳಲ್ಲಿ ಗಣತಿ ಪೂರ್ಣಗೊಂಡಿದೆ.

ಪಾಲಿಕೆ ವ್ಯಾಪ್ತಿಯಲ್ಲಿ ತುಸು ಹಿನ್ನಡೆ

ಗಣತಿ ಕಾರ್ಯದ ಬೃಹತ್ ಪಡೆ

ಮುಂದಿನ ಮೂರು ದಿನಗಳಲ್ಲಿ ಅಂತ್ಯ

ಗ್ರಾಮಾಂತರ ಮತ್ತು ಬಜಪೆ ವ್ಯಾಪ್ತಿಯಲ್ಲಿ ಗುರಿಯನ್ನು ಯಶಸ್ವಿಯಾಗಿ ತಲುಪಿವೆ. ನಗರ ವ್ಯಾಪ್ತಿಯಲ್ಲಿ ಸಣ್ಣಮಟ್ಟದ ಹಿನ್ನಡೆಯಾಗಿದ್ದರೂ, ಮುಂದಿನ 3 ದಿನಗಳಲ್ಲಿ ಶೇ.100ರಷ್ಟು ಗಣತಿ ಪೂರ್ಣಗೊಳಿಸಲಾಗುವುದು. - ಟಿ.ರಮೇಶ್ ಬಾಬು, ತಹಸೀಲ್ದಾರ್ ಮಂಗಳೂರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net