ಶಬರಿಮಲೆಗೆ ಪ್ರಸ್ತುತ ಸಮಯದಲ್ಲಿ ಕರ್ನಾಟಕದಿಂದ ಹೆಚ್ಚಿನ ಭಕ್ತರು ಯಾತ್ರೆ ಕೈಗೊಳ್ಳುವ ಕಾರಣ ಯಾತ್ರಾರ್ಥಿಗಳಿಗೆ ಸೂಕ್ತ ಸಹಕಾರ ನೀಡಲು ಮತ್ತು ಸೂಕ್ತ ಮಾಹಿತಿ ಒದಗಿಸಲು ಸಹಾಯವಾಣಿ ಕೇಂದ್ರವು ಎರಿಮೇಲಿ ದೇವಾಲಯದಲ್ಲಿ ಕಾರ್ಯಾರಂಭಿಸಿದೆ. ಭಕ್ತರು ಸಹಾಯವಾಣಿ ಕೇಂದ್ರದ ಪ್ರಯೋಜನ ಪಡೆದುಕೊಳ್ಳಬಹುದು ಎಂದು ಇಲಾಖೆ ಪ್ರಕಟಣೆ ತಿಳಿಸಿದೆ.