ಬಡವರಿಗೆ ನೆರವು ಶ್ರೇಷ್ಠ ಕಾರ್ಯ

ಆರ್ಥಿಕವಾಗಿ ಕಷ್ಟದಲ್ಲಿರುವ ಹಾಗೂ ಮದುವೆ ಮತ್ತಿತರ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ಆಶಾಕಿರಣವಾಗಿ ಕೆಲಸ ಮಾಡುವುದು ಶ್ರೇಷ್ಠ ಕಾರ್ಯ ಎಂದು ವಾಮಂಜೂರು ಮಸೀದಿ ಧರ್ಮಗುರು ಮೊಹಮ್ಮದ್ ಫಾಯಿಝ್ ಪಾಲಿಲಿ ಹೇಳಿದರು.
7 ಸ್ಟಾರ್ ಫ್ರೆಂಡ್ಸ್ ವಾಮಂಜೂರು ಇದರ ಲೋಗೊ ಅನಾವರಣ ಮಾಡಲಾಯಿತು. ಧರ್ಮಗುರು ಮೊಹಮ್ಮದ್ ಫಾಯಿಝ್ ಪಾಲಿಲಿ, ಧರ್ಮಗುರುಗಳಾದ ಹುಸೈನ್ ಕಳಸ, ಇಲ್ಯಾಸ್ ಸಅದಿ, ಜಾಫರ್ ಮತ್ತಿತರರಿದ್ದರು.
7 ಸ್ಟಾರ್ ಫ್ರೆಂಡ್ಸ್ ವಾಮಂಜೂರು ಇದರ ಲೋಗೊ ಅನಾವರಣ ಮಾಡಲಾಯಿತು. ಧರ್ಮಗುರು ಮೊಹಮ್ಮದ್ ಫಾಯಿಝ್ ಪಾಲಿಲಿ, ಧರ್ಮಗುರುಗಳಾದ ಹುಸೈನ್ ಕಳಸ, ಇಲ್ಯಾಸ್ ಸಅದಿ, ಜಾಫರ್ ಮತ್ತಿತರರಿದ್ದರು.
Published on: 

ಗುರುಪುರ: ಆರ್ಥಿಕವಾಗಿ ಕಷ್ಟದಲ್ಲಿರುವ ಹಾಗೂ ಮದುವೆ ಮತ್ತಿತರ ಸಮಸ್ಯೆ ಎದುರಿಸುತ್ತಿರುವ ಕುಟುಂಬಗಳಿಗೆ ಆಶಾಕಿರಣವಾಗಿ ಕೆಲಸ ಮಾಡುವುದು ಶ್ರೇಷ್ಠ ಕಾರ್ಯ ಎಂದು ವಾಮಂಜೂರು ಮಸೀದಿ ಧರ್ಮಗುರು ಮೊಹಮ್ಮದ್ ಫಾಯಿಝ್ ಪಾಲಿಲಿ ಹೇಳಿದರು.

ವಾಮಂಜೂರಿನಲ್ಲಿ ಸೋಮವಾರ 7 ಸ್ಟಾರ್ ಫ್ರೆಂಡ್ಸ್ ವಾಮಂಜೂರು ಲೋಗೊ ಅನಾವರಣ ಮತ್ತು ದಫ್ ಸ್ಪರ್ಧೆಯ ದಿನಾಂಕ ಘೋಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಕೆತ್ತಿಕಲ್ ಜುಮಾ ಮಸೀದಿಯ ಅಧ್ಯಕ್ಷ ಅಬ್ದುಲ್ ಖಾದರ್, ಕಾರ್ಯದರ್ಶಿ ಅಬ್ದುಲ್ ರಹಿಮಾನ್, ವಾಮಂಜೂರು ಜುಮಾ ಮಸೀದಿ ಕಾರ್ಯದರ್ಶಿ ಇಸ್ಮಾಯಿಲ್, ವಾಮಂಜೂರು ಯಂಗ್‌ಮೆನ್ಸ್ ಅಧ್ಯಕ್ಷ ಪಿ.ನಜೀರ್, ವಾಮಂಜೂರು ನೇತಾಜಿ ಆಟೋ ಚಾಲಕರ ಸಂಘದ ಅಧ್ಯಕ್ಷ ಸಲೀಂ ಮಲ್ಲಿಕ್, ಅಲ್ ಹುದಾ ಯಂಗ್‌ಮೆನ್ಸ್ ಕೆತ್ತಿಕಲ್ ಅಧ್ಯಕ್ಷ ಅಬ್ದುಲ್ ಬಶೀರ್, ಉಪಾಧ್ಯಕ್ಷ ಅನ್ಸಾರ್ ಕೆತ್ತಿಕಲ್, ಮುಸ್ತಫಾ ಕೆತ್ತಿಕಲ್, ಸಂಘಟನೆ ಗೌರವಾಧ್ಯಕ್ಷ ಮನ್ಸೂರ್ ಅಲಿ ದೆಬ್ಬೆಲಿ, ಅಧ್ಯಕ್ಷ ಜಮಾಲ್, ಪದಾಧಿಕಾರಿಗಳಾದ ಸಿರಾಜ್, ರಜಾಕ್ ಕೆತ್ತಿಕಲ್, ಶರೀಫ್, ಮಜೀದ್, ಮುಸ್ತಫಾ, ತನ್ಸೀಫ್ ಹಾಗೂ ಸ್ಥಳೀಯ ಪ್ರಮುಖರು ಇದ್ದರು. ಕಲಂದರ್ ಶಾಫಿ ಗುರುಪುರ ನಿರೂಪಿಸಿ, ಧರ್ಮಗುರು ಇಲ್ಯಾಸ್ ಸಅದಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net